Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸೆ. 6 ರಂದು ಸುರತ್ಕಲ್ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನೂತನ ಧ್ವಜಸ್ತಂಭಕ್ಕೆ ಎಳ್ಳೆಣ್ಣೆ ಸಮರ್ಪಣೆ

ಸುರತ್ಕಲ್ :  ಸಮೀಪದ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ  ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತಂಭ (ಕೊಡಿಮರ) ಕ್ಕೆ ಎಳ್ಳೆಣ್ಣೆ ಸಮರ್ಪಣಾ ಸೇವೆ ಯು ಸೆ. 6 ರ   ಆದಿತ್ಯವಾರ ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭಗೊಳ್ಳಲಿದೆ.
ದೈವಸ್ಥಾನದ ಸಮಗ್ರ ಜೀರ್ಣೋದ್ದಾರ ಸಲುವಾಗಿ ಊರ ಹತ್ತು ಸಮಸ್ತರು ಸೇರಿ ಮುಷ್ಟಿ ಕಾಣಿಕೆ ಸಮರ್ಪಣೆ ಹಾಗೂ 11.30ಕ್ಕೆ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ, ಸಮಾಲೋಚನ ಸಭೆ ನಡೆಯಲಿದೆ.  ಕಟೀಲು ದೇವಳದ ಪ್ರಧಾನ ಅರ್ಚಕ  ವೇದಮೂರ್ತಿ  ಕೆ. ಶ್ರೀ ಲಕ್ಷ್ಮಿನಾರಾಯಣ ಆಸ್ರಣ್ಣ ರವರು ದೀಪ ಪ್ರಜ್ವಲನೆಗೊಳಿಸಲಿದ್ದಾರೆ.
ಗುರುಪುರ ವಜ್ರದೇಹಿ ಮಠದ  ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು  ಆಶೀರ್ವಚನ ನೀಡಲಿದ್ದಾರೆ. 
ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಾ ವೈ ಭರತ್ ಶೆಟ್ಟಿ, ಕೊಡಿಪಾಡಿ ಬಾಳಿಕೆ ಜಗನ್ನಾಥ ಅತ್ತಾರ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು, ಕಾರ್ಯಧ್ಯಕ್ಷ ಡಾ.ಕೆ.ಪಿ.ಕೆ ಹೆಗ್ಡೆ ಭಾಗವಹಿಸಲಿದ್ದಾರೆ. ದೈವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ಟಿ.ರಮಾನಾಥ ಶೆಟ್ಟಿ,  ಕಾರ್ಯದರ್ಶಿ ಐ. ಜಯ ಅಮೀನ್, ಕೋಶಾಧಿಕಾರಿ ಭೋಜ ದೇವಾಡಿಗ  ಉಪಸ್ಥಿತಲಿರಿರುವರು. 
ಕೊಡಿಮರಕ್ಕೆ ಸಮರ್ಪಣೆಗೆ ಬೇಕಾಗುವ ಶುದ್ಧ ಎಳ್ಳೆಣ್ಣೆಯನ್ನು ಶ್ರೀ ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ವಿನಂತಿಸಿದ್ದಾರೆ.