Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನ ಜೀರ್ಣೋದ್ದಾರ ಮನವಿ ಪತ್ರ ಬಿಡುಗಡೆ

ಸುರತ್ಕಲ್: ದೇವಸ್ಥಾನ ದೈವಸ್ಥಾನಗಳ ಜೀರ್ಣೋದ್ಧಾರದಲ್ಲಿ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ. ದೇವಸ್ಥಾನಗಳಿಗಿಂತ ದೈವಸ್ಥಾನಗಳ ವ್ಯಾಪ್ತಿ ದೊಡ್ಡದಾಗಿದೆ. ಸೀಮೆ ದೈವ ಜಾರಂದಾಯನ ಕಾರಣಿಕ ದೊಡ್ಡದು ಎನ್ನುವುದಕ್ಕೆ ಈ ಕ್ಷೇತ್ರದ ಇತಿಹಾಸವೇ ಸಾಕ್ಷಿ ಎಂದು ಗುರುಪುರ ಶ್ರೀ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಸುರತ್ಕಲ್ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಪ್ರಸ್ತಾವಿತ ಸುಮಾರು ಒಂದು ಕೋಟಿ ರೂ. ವೆಚ್ಚದ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಧ್ವಜಸ್ತಂಭ (ಕೊಡಿಮರ)ಕ್ಕೆ ಎಳ್ಳೆಣ್ಣೆ ಸಮರ್ಪಣೆ, ಮುಷ್ಟಿ ಕಾಣಿಕೆ ಸಮರ್ಪಣೆ, ಹಾಗೂ ಜೀರ್ಣೋದ್ದಾರದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಿ, ಶುಭ ಹಾರೈಸಿದರು. ಶಾಸಕ ಡಾ. ವೈ ಭರತ್ ಶೆಟ್ಟಿ  ಮಾತನಾಡಿ, ಜೀರ್ಣೋದ್ಧಾರಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ಹೇಳಿದರು.
ದೈವಸ್ಥಾನದ ಆಡಳಿತ ಸಮಿತಿ ಟ್ರಸ್ಟಿ ಡಾ. ಟಿ. ರಮಾನಾಥ ಶೆಟ್ಟಿ ಪ್ರಸ್ತಾವಿಸಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಮಿತಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು,  ಕಾರ್ಯಾಧ್ಯಕ್ಷ  ಕೆ.ಪಿ.ಕೆ. ಹೆಗ್ಡೆ, ಶಂಕರ ನಾರಾಯಣ ಭಟ್, ಜಾರಂದಾಯ ದೈವದ ಅರ್ಚಕ ಮೋಹನ್ ಪೂಜಾರಿ, ಕಾರ್ಯದರ್ಶಿ ಜಯ ಅಮೀನ್, ಕೋಶಾಧಿಕಾರಿ ಭೋಜ ದೇವಾಡಿಗ, ಆಡಳಿತ ಸಮಿತಿ, ಮಹಿಳಾ ಸಮಿತಿ ಪದಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮನೆತನದವರು  ಉಪಸ್ಥಿತರಿದ್ದರು. ಸ್ವರ್ಣಿಕ, ಆದ್ಯ  ಪ್ರಾರ್ಥಿಸಿದರು. ಸುಧಾಕರ ಕುಲಾಲ್ ನಿರೂಪಿಸಿದರು.
ಜೀರ್ಣೋದ್ಧಾರ ಕಾರ್ಯವು ಹಿತ್ತಾಳೆ ಹೊದಿಕೆಯ ಧ್ವಜಸ್ತಂಭ ಸ್ಥಾಪನೆ, ಗರ್ಭಗುಡಿಗೆ ಮುಚ್ಚಿಗೆ, ಆವರಣ ಗೋಡೆ, ಇತ್ಯಾದಿ ಪೂರ್ಣಗೊಳಿಸಿ ಮುಂದಿನ ಮಾಚ್೯ 20 ರಿಂದ 24 ರ ವರೆಗೆ ಬ್ಹ್ಮಕಲಶೋತ್ಸವ ಕಾಲಾವಧಿ ಬಂಡಿ ಉತ್ಸವ ನಡೆಯಲಿದೆ.