ಹಿಂದೂಗಳ ತೆನೆ ಹಬ್ಬಕ್ಕೆ ಕ್ರೈಸ್ತರೊಬ್ಬರು ಭತ್ತದ ತೆನೆಯನ್ನು ಉಚಿತವಾಗಿ ನೀಡುವ ಮೂಲಕ ಹಿಂದೂ ಕ್ರೈಸ್ತ ಬಾಂಧವರ ಮಧ್ಯೆ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಹಿಂದೂಗಳ ತೆನೆ ಹಬ್ಬಕ್ಕೆ ಕ್ರೈಸ್ತರೊಬ್ಬರು ಭತ್ತದ ತೆನೆಯನ್ನು ಉಚಿತವಾಗಿ ನೀಡುವ ಮೂಲಕ ಹಿಂದೂ ಕ್ರೈಸ್ತ ಬಾಂಧವರ ಮಧ್ಯೆ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಸಾಮಾನ್ಯವಾಗಿ ಪ್ರತೀ ವರ್ಷ ಗಣೇಶ ಚತುರ್ಥಿ ಸಂದರ್ಭ ಹಿಂದೂ ಬಾಂಧವರ ತೆನೆ ಹಬ್ಬ ಬರುತ್ತದೆ. ಈ ತೆನೆ ಹಬ್ಬಕ್ಕೆ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ನಿವಾಸಿ ವಾಲ್ಟರ್ ಡಿಸೋಜ ಹಿಂದುಗಳಿಗೆ ತೆನೆ ನೀಡಿ ಜಾತಿ, ಧರ್ಮ ಹಾಗೂ ಸಮುದಾಯಗಳ ನಡುವೆ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ಕಾರ್ಯ ಸಾಕ್ಷಿಯಾಗಿದ್ದಾರೆ, ವಾಲ್ಟರ್ ಅವರು ಅವರ ಉದ್ಯಮದಲ್ಲಿ ತೊಡಗಿಕೊಂಡಿದ್ದರೂ, ತಮ್ಮ ಹಿರಿಯರ ಕಾಲದಿಂದ ಬಂದ ಕೃಷಿಯನ್ನು ಮಾತ್ರ ಕೈಬಿಟ್ಟಿಲ್ಲ ಸುಮಾರು ಮೂರು ಎಕ್ಕರೆ ಜಮೀನಿನಲ್ಲಿ ಒಂದು ಎಕ್ಕರೆ ತೆಂಗು, ಕಂಗು, ಒಂದು ಎಕ್ಕರೆ ಗುಡ್ದ ಪ್ರದೇಶವಾದರೆ ಮತ್ತೊಂದು ಎಕ್ಕರೆಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ, ಹಿಂದುಗಳ ಮತ್ತು ಕ್ರೈಸ್ತ ಬಾಂಧವರ ತೆನೆ ಹಬ್ಬಕ್ಕೆ ತೆನೆ ಸಿಗುವಂತೆ ಪ್ರತ್ಯೇಕ ಭತ್ತದ ನಾಟಿ ಮಾಡಿ ದೇವಸ್ಥಾನ ದೈವಸ್ಥಾನ ಮತ್ತು ಹಿಂದೂ ಜನರಿಗೆ ಯಾವುದೇ ಸ್ವಾರ್ಥವಿಲ್ಲದೆ ಉಚಿತವಾಗಿ ತೆನೆಯನ್ನು ಹಂಚುತ್ತಾರೆ, ಸುಮಾರು ೨೦ ವರ್ಷಗಳಿಂದ ಈ ಸೇವೆಯಲ್ಲಿ ವಾಲ್ಟರ್ ಡಿಸೋಜ ಅವರು ತೊಡಗಿಸಿಕೊಂಡಿದ್ದಾರೆ. ಭತ್ತದ ಕೃಷಿಗೆ ನವೀಲಿನ ಕಾಟವಿದ್ದು ತೆನೆಗೆ ಯಾವುದೇ ತೊಂದರೆ ಆಗಬಾರದು ಎಂದು ಗದ್ದೆಯ ಮೇಲ್ಬಾಗದಲ್ಲಿ ಬಲೆಯನ್ನು ಅಳವಡಿಸಿ ರಕ್ಷಿಸಿದ್ದಾರೆ. ವಾಲ್ಟರ್ ಡಿಸೋಜ ಅವರು ಸ್ಥಳೀಯವಾಗಿ ಪಾವಂಜೆ, ತೋಕೂರು, ಕಲ್ಲಾಪು ಮತ್ತಿತರ ದೈವಸ್ಥಾನ ದೇವಸ್ಥಾನಗಳಿಗೆ, ಪಕ್ಷಿಕೆರೆ ಮೂಲ್ಕಿ, ಪೆರ್ಮುದೆ, ಪಾಲಡ್ಕ ಕಿನ್ನಿಗೋಳಿ, ಕಾಟಿಪಳ್ಳ ಮತ್ತಿತರ ಚರ್ಚ್ ಗಳಿಗೆ ಮತ್ತು ನೂರಾರು ಹಿಂದುಗಳಿಗೆ ತೆನೆ ನೀಡುತ್ತಿದ್ದಾರೆ.