ಪಕ್ಷಿಕೆರೆ ಸಮೀಪದ ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಯಿಕುಡೆ ಇದರ ಆಶ್ರಯದಲ್ಲಿ 26 ನೇ ವರ್ಷದ ವೈಭವ ಲಕ್ಷ್ಮೀ ಪೂಜೆ
ಪಂಜ : ಪಕ್ಷಿಕೆರೆ ಸಮೀಪದ ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಯಿಕುಡೆ ಇದರ ಆಶ್ರಯದಲ್ಲಿ 26 ನೇ ವರ್ಷದ ವೈಭವ ಲಕ್ಷ್ಮೀ ಪೂಜೆ ವಿಠೋಬಾ ಭಜನಾ ಮಂದಿರದಲ್ಲಿ ಪಂಜ ಮಹಾ ಗಣಪತಿ ಮಂದಿರದ ಪ್ರಧಾನ ಅರ್ಚಕರಾದ ಸುರೇಶ್ ಭಟ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಮಹಾ ಗಣಪತಿ ಮಂದಿರದ ಅರ್ಚಕರಾದ ಕಾರ್ತಿಕೇಯ ಭಾರ್ಗವ, ಮತ್ತು ವಿಠೋಬಾ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ನವಜ್ಯೋತಿ ಮಹಿಳಾ ಮಂಡಲ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು