Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀಮತಿ ಇಂದಿರಾ ಎನ್. ರಾವ್ ಅವರಿಗೆ 'ಡಾ|| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ' ಪ್ರಧಾನ


ಕೋಟ: ಕೋಟತಟ್ಟು ಗ್ರಾಮ ಪಂಚಾಯತ್, ಕಾರಂತ ಪ್ರತಿಷ್ಠಾನ (ರಿ.), ಕೋಟ ಹಾಗೂ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕಾರಂತ ಥೀಮ್ ಪಾರ್ಕ್, ಕೋಟದಲ್ಲಿ 'ಡಾ|| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ' ಪ್ರಧಾನ ಸಮಾರಂಭವು  ಸೆಪ್ಟೆಂಬರ್ 26ರ ಶನಿವಾರದಂದು ನಡೆಯಿತು.  
ಸಮಾರಂಭದಲ್ಲಿ ಮಂಗಳೂರು ತಾಲೂಕಿನ  ಬಡಗ ಎಕ್ಕಾರು ಸರಕಾರಿ  ಪ್ರೌಢಶಾಲೆಯ   ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಇಂದಿರಾ ಎನ್. ರಾವ್ ಅವರನ್ನು  ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉಡುಪಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಲೋಕೇಶ್ ಸಿ. ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಒ ರವೀಂದ್ರ ರಾವ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾ ಪಿ.  ಸಿರಾಜ್ ಹಾಜಿ ಅಬ್ದುಲ್ಲ ಅಹ್ಮದ್ ಹಾಗೂ ಸಂದೀಪ್ ಶೆಟ್ಟಿ, ಶಿರಿಯಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅಶೋಕ ತೆಕ್ಕಟ್ಟೆ ಅವರು ಉಪಸ್ಥಿತರಿದ್ದರು.ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಯೋಜಕರಾದ ಸುಬ್ರಾಯ ಆಚಾರ್ಯ ಮಣೂರು ಮತ್ತು ಸತೀಶ್ ವಡ್ಡರ್ಸೆ ಉಪಸ್ಥಿತರಿದ್ದರು.