Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತಾಸ್ಕೆಂಟ್‌:'ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್' ಪ್ರಶಸ್ತಿ: ರಾಹುಲ್ ಚಂದ್ರಶೇಖರ್‌ಗೆ ಪ್ರತಿಷ್ಠಿತ ಗೌರವ- ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದನೆ



ತಾಸ್ಕೆಂಟ್ (ಉಜೈಕಿಸ್ತಾನ):
 ವಿವಿಧ ಗಮನಾರ್ಹ ಸಾಧನೆಗೈದ ಕರ್ನಾಟಕದ 10 ಗಣ್ಯರನ್ನು ಉಜ್ಜಿಕಿಸ್ತಾನದ ರಾಜಧಾನಿ ತಾಸ್ಕೆಂಟ್ ನಲ್ಲಿ ಆಯೋಜಿಸಲಾಗಿದ್ದ 14ನೇ ಆವೃತ್ತಿಯ ' ವಿಶ್ವವಾಣಿ ಗ್ಲೋಬಲ್ ಅಚೀವರ್ಸ್' ಪ್ರಶಸ್ತಿ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದವರಲ್ಲಿ ಯುವ ಉದ್ಯಮಿ ಹಾಗೂ ಸಮಾಜ ಸೇವಕ ರಾಹುಲ್ ಚಂದ್ರಶೇಖರ್ ಪ್ರಮುಖರು. ಜಾಗತಿಕ ಮಟ್ಟದಲ್ಲಿ ಉದ್ಯಮವನ್ನು ವಿಸ್ತರಿಸುವುದರ ಜೊತೆಗೆ
 ಜೊತೆಗೆ ಸಮಾಜಮುಖಿ ಕಳಕಳಿಯನ್ನು ನಿರಂತರವಾಗಿ  ಕಾಯ್ದುಕೊಂಡು ಬಂದಿದ್ದಕ್ಕಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ರಷ್ಯಾದ ಹೈಯರ್ ಸ್ಕೂಲ್ ಆಫ್ ಎಕನಾಮಿಕ್ಸ್, ಜರ್ಮನಿಯ ಮ್ಯೂನಿಚ್ ಬಿಸಿನೆಸ್ ಸ್ಕೂಲ್ ಹಾಗೂ ಲಂಡನ್ ವೆಸ್ಟ್‌ಮಿನ್‌ಸ್ಟರ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಪೂರೈಸಿರುವ ರಾಹುಲ್, ವಿದ್ಯಾರ್ಥಿ ದೆಸೆಯಲ್ಲೇ ಉದ್ಯಮ ರಂಗಕ್ಕೆ ಕಾಲಿಟ್ಟವರು. ಲಂಡನ್‌ನಲ್ಲಿ ಪ್ರಾಪರ್ಟಿ ಕನ್ಸಲ್ಟನ್ಸಿ ಆರಂಭಿಸಿ ಕೇವಲ ಒಂಬತ್ತು ತಿಂಗಳಲ್ಲಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ ಹೆಗ್ಗಳಿಕೆ ಇವರದ್ದು. ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಇವರು, ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಹಾಗೂ ಐಷಾರಾಮಿ ಕಾರುಗಳ ಬಾಡಿಗೆ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 
70ಕ್ಕೂ ಹೆಚ್ಚು ಗಣ್ಯ ಗ್ರಾಹಕರ ಪೋರ್ಟ್‌ಫೋಲಿಯೊ ನಿರ್ವಹಿಸುತ್ತಿರುವ ರಾಹುಲ್, 55 ಮಂದಿಯ ನುರಿತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ಜೊತೆಗೆ ಸಾವಿರಾರು ಕ್ಷೇತ್ರಗಳಲ್ಲಿ ಭಾರತಕ್ಕೆ ಮರಳಿದ ಅವರು 'ರಾಷ್ಟ್ರ ಸೇವಾ ಚಾರಿಟೇಬಲ್ ಟ್ರಸ್ಟ್' ಮಂದಿ ಮೂಲಕ ಸಕ್ರಿಯವಾಗಿ ಪರಿಹಾರ ಕಾರ್ಯಗಳಲ್ಲಿ  ತೊಡಗಿಸಿಕೊಂಡಿದ್ದರು. ರೋಗಿಗಳಿಗೆ ಆಕ್ಸಿಜನ್, ಆಸ್ಪತ್ರೆ ಬೆಡ್ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಆಹಾರ ಮತ್ತು ದಿನಸಿ ಪದಾರ್ಥಗಳನ್ನು ವಿತರಿಸಿ ಭಾರತದ ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ ಉದ್ಯಮಿ ಅವರ ಪುತ್ರ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುನಿಲ್‌ ಶಾಸ್ತ್ರಿ, ಚಂದ್ರಶೇಖರ್ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ವಿಶ್ವವಾಣಿ ಪ್ರಧಾನ ಉದ್ಯಮ ಸಂಪಾದಕ ವಿಶ್ವೇಶ್ವರ ಭಟ್, ಮಾಜಿ ಶಾಸಕ ಬಿ.ಎಂ. ಸುಕುಮಾ‌ರ್ ಪ್ರದಾನ ಮಾನವೀಯತೆ ಮೆರೆದಿದ್ದರು.ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶೆಟ್ಟಿ ಹಾಗೂ ಪರ್ವ ಗ್ರೂಪ್ ಸಂಸ್ಥಾಪಕ ಎಚ್.ಪಿ. ನೀಲೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸಮಾರಂಭದಲ್ಲಿ ಪಾಲ್ಗೊಂಡ ಗಣ್ಯರು ಹಾಗೂ ಪ್ರಶಸ್ತಿ ಆಯ್ಕೆ ಪುರಸ್ಕೃತರು
ತಾಸ್ಕೆಂಟ್ ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.
ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದನೆ 
ವಿಶ್ವವಾಣಿ ಗ್ಲೋಬಲ್ ಅಚೀವರ್ಸ್' ಪ್ರಶಸ್ತಿ ಪಡೆದಿರುವ ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಅಂತರಾಷ್ಟ್ರೀಯ ವಾಸ್ತುತಜ್ಞ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದಿಸಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿ ರಾಹುಲ್ ಚಂದ್ರಶೇಖರ್ ರವರ ಸಾಧನೆ ಮೂಲಕ ಯುವ ಜನಾಂಗಕ್ಕೆ ಮಾದರಿ ಎಂದು ಹೇಳಿದ್ದಾರೆ.