Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವರ್ಷಂಪ್ರತಿ ಸೆಪ್ಟೆಂಬರ್ 18ಕ್ಕೆ ತುಳುನಾಡ ಹಬ್ಬ ಆಚರಣೆ: ಮಿಥುನ್ ರೈ



ತುಳು ಭಾಷೆಗೆ ರಾಜ್ಯದ 2ನೇ ಭಾಷೆಯ ಸ್ಥಾನಮಾನ ಕಲ್ಪಿಸಿರುವ ಬಗ್ಗೆ ವರ್ಷಂಪ್ರತಿ  ಸೆಪ್ಟೆಂಬರ್ 18ರಂದು ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ತುಳುನಾಡ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಶ್ರೀ  ಮಿಥುನ್ ರೈ ಅವರು ಹೇಳಿದರು.
ಶನಿವಾರ ಮೂಡುಬಿದಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನೊಳಗೊಂಡು ಈ ಆಚರಣೆ ಇರಲಿದೆ. ಈ ವರ್ಷದ  ಅಕ್ಟೋಬರ್ 1 ರಿಂದ ಕ್ಷೇತ್ರದ ಪ್ರತೀ ಮನೆ, ವಾಣಿಜ್ಯ ಕಟ್ಟಡಗಳಲ್ಲಿ ತುಳು ಲಾಂಛನ, ಬಾವುಟ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.
ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುಳು ಬಾವುಟ ಹಾಕುವ ಬಗ್ಗೆ ನಿಲ್ದಾಣದ ಅಧಿಕಾರಿಗಳು, ಸಂಸದರಿಗೆ ಸೋಮವಾರ ಮನವಿ ನೀಡಲಾಗುವುದು ಎಂದರು.