Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಪಟ್ಟ ಮೂರು ಕಾವೇರಿ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಮಾಗಣೆಯ ಗ್ರಾಮಸ್ಥರ ಸಭೆ

ಕಿನ್ನಿಗೋಳಿ: ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಪಟ್ಟ ಮೂರು ಕಾವೇರಿ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಭಾನುವಾರ ಮಾಗಣೆಯ ಗ್ರಾಮಸ್ಥರ ಸಭೆ ಆಡಳಿತ ಸಮಿತಿಯ ಅಧ್ಯಕ್ಷ ಲವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಗಣೇಶ್ ಭಟ್ ಏಳಿಂಜೆ ನೇತೃತ್ವದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ  ಇರಿಸಿದ ಸ್ವರ್ಣಾರೂಢ ಪ್ರಶ್ನಾಚಿಂತನೆಯಂತೆ ದೇವಸ್ಥಾನದ ವಾಸ್ತು ನವೀಕರಣ  ಮತ್ತು ಸಮಗ್ರ ಅಭಿವೃದ್ದಿ,  ಜೀರ್ಣೋದ್ದಾರ ಕ್ಕಾಗಿ ಜೀರ್ಣೋದ್ದಾರ ಸಮಿತಿ ರಚನೆಗೆ ಚಾಲನೆ ನೀಡಲಾಯಿತು. ಸಮಿತಿಯ ವಿವಿಧ ಜವಾಬ್ದಾರಿಗಳನ್ನು  ಗ್ರಾಮಸ್ಥರಿಗೆ ನೀಡಲಾಯಿತು.  ಒಂದೆರಡು ದಿನದಲ್ಲಿ ಪೂರ್ಣ ಪ್ರಮಾಣದ ಜೀರ್ಣೋದ್ದಾರ ಸಮಿತಿಯನ್ನು ಘೋಷಿಸುವುದಾಗಿ  ಆಡಳಿತ ಸಮಿತಿಯ ಅಧ್ಯಕ್ಷ ಲವ ಶೆಟ್ಟಿ ಹೇಳಿದರು.  ಆತ್ತೂರು ಬೈಲು ವೆಂಕಟರಾಜ ಉಡುಪ ಮತ್ತು ಕೊಡೆತ್ತೂರು ದೇವಸ್ಯ ಮಠ ವೇದವ್ಯಾಸ ಉಡುಪ  ಆಶೀರ್ವಚನ ನೀಡಿದರು, ಕಾರ್ಯಕ್ರಮದಲ್ಲಿ ಅಜಾರು ನಾಗರಾಜ ರಾಯರು, ರಾಮಚಂದ್ರ ಶಾನುಬೋಗರು,  ಜಾಗತಿಕ ಬಂಟರ ಸಂಘದ ಆಧ್ಯಕ್ಷ ಐಕಳ  ಹರೀಶ್ ಶೆಟ್ಟಿ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ಭುವನಾಭಿರಾಮ ಉಡುಪ, ಮೋಹನ್ ಗುರಿಕಾರ ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ಕೋಶಾಧಿಕಾರಿ  ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರುಪ್ರಸ್ತಾವನೆಗೈದರು,   ಸಮಿತಿಯ ಕಾರ್ಯದರ್ಶಿ ಪ್ರಸನ್ನ  ಶೆಟ್ಟಿ ಅತ್ತೂರುಗುತ್ತುಕಾರ್ಯಕ್ರಮ ನಿರೂಪಿಸಿದರು.