ಮುಲ್ಕಿ: ಬಪ್ಪನಾಡು ದೇವಸ್ಥಾನದಲ್ಲಿ ವಿಜೃಂಭಣೆಯ ಅನಂತ ವೃತ
ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅನಂತ ವೃತ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಬಪ್ಪನಾಡು ಶಾಂಭವಿ ನದಿಯಲ್ಲಿ ವಿಶೇಷ ಪೂಜೆ ನಡೆದು ಕಲಶ ಪೂರಣ ನಡೆಯಿತು
ಬಳಿಕ ವಿವಿಧ ವಾದ್ಯ ಘೋಷಗಳೊಂದಿಗೆ ಕಲಶವನ್ನು ದೇವಸ್ಥಾನಕ್ಕೆ ತಂದು ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ನಡೆಯಿತು
ಈ ಸಂದರ್ಭ ಅರ್ಚಕ ಪ್ರಸಾದ್ ಭಟ್, ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು,ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ವಿಶ್ವನಾಥ ಬಪ್ಪನಾಡು, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ನಾಗರಾಜ ಬಪ್ಪನಾಡು,ಅಕೌಂಟೆಂಟ್ ಶಿವಶಂಕರ್, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು