Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ವಿಜಯಾ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

ಮುಲ್ಕಿ: ಪ್ರತಿಷ್ಠಿತ  ವಿಜಯಾ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ  ಚರಂತಿ ಪೇಟೆ ಬಳಿ ನಡೆಯಿತು. ಬಪ್ಪನಾಡು ಕ್ಷೇತ್ರದ ಅರ್ಚಕರುಗಳಾದ ನರಸಿಂಹ ಭಟ್, ಪ್ರಸಾದ ಭಟ್ ರವರು ವಿಶೇಷ ಪೂಜೆ ನೆರವೇರಿಸಿದರು
ನೂತನ ಕಟ್ಟಡಕ್ಕೆ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ  ಶಿಲಾನ್ಯಾಸ  ನೆರವೇರಿಸಿದರು 
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯಲಿ ಎಂದು ಶುಭ ಹಾರೈಸಿದರು 
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿಯವರ ನೇತೃತ್ವದಲ್ಲಿ ಸಂಘವು ಈಗಾಗಲೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳನ್ನು ದೊರಕಿಸಲು ಶ್ರಮಿಸುತ್ತಿದ್ದು ನೂತನ ಕಟ್ಟಡ ನಿರ್ಮಾಣದ ಮುಖಾಂತರ ಮತ್ತಷ್ಟು ಸಂಘ ಅಭಿವೃದ್ಧಿಪಥದತ್ತ ಮುನ್ನಡೆಯಲಿ ಎಂದರು 
ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು,ಮುಲ್ಕಿ ಬಿಲ್ಲವ ಸಂಘದ ಮಾಜೀ ಅಧ್ಯಕ್ಷ ಗೋಪಿನಾಥ  ಪಡಂಗ,ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷರಾದ ಸುನಿಲ್ ಆಳ್ವ,ಸತೀಶ್ ಅಂಚನ್,ಸುಭಾಷ್ ಶೆಟ್ಟಿ,ಮಾಜೀ ಸದಸ್ಯರಾದ ಶೈಲೇಶ್ ಕುಮಾರ್,ಭೀಮಾ ಶಂಕರ್,ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಬಳ್ಕುಂಜೆ, ಸ್ಥಳೀಯರಾದ ಕಿಶೋರ್ ಶೆಟ್ಟಿ ಬಪ್ಪನಾಡು,ಉದಯ ಕುಮಾರ್ ಶೆಟ್ಟಿ ಅಧಿಧನ್, ಶ್ಯಾಮ್ ಪ್ರಸಾದ್ ಪಡು ಪಣಂಬೂರು, ಉದಯ ಕುಮಾರ್ ಶೆಟ್ಟಿ ಕಾರ್ನಾಡ್ ಬೈಪಾಸ್, ಅಶೋಕ್ ಜನನಿ, ಉದಯ ಅಮೀನ್ ಮಟ್ಟು,ನವೀನ್ ರಾಜ್ ,ಜೀವನ್ ಶೆಟ್ಟಿ ಅಂಗರಗುಡ್ಡೆ, ವಿನೋದ್ ಕುಮಾರ್ ಬೊಳ್ಳೂರು, ರಾಜೇಶ್ ಕಿಲ್ಪಾಡಿ,ಸಾಧು ಅಂಚನ್ ಮಟ್ಟು, ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ನರಸಿಂಹ ಪೂಜಾರಿ, ರಾಜೇಶ್ ಶೆಟ್ಟಿ, ಅಶೋಕ್ ಕುಮಾರ್ ಚಿತ್ರಾಪು, ದೇವಪ್ರಸಾದ್ ಕೆಂಪುಗುಡ್ಡೆ, ಪದ್ಮಿನಿ ವಿಜಯ ಕುಮಾರ್ ಶೆಟ್ಟಿ ಮಮತಾ ಪೂಂಜಾ,ಪ್ರಭಾಕರ ದೇವಾಡಿಗ,
ನಂಜುಂಡ ಆರ್ ಕೆ, ರಾಮ್ ನಾಯ್ಕ್,ಪ್ರಬಂಧಕ ಚಂದ್ರಕಾಂತ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾದ ಶಾಖಾಧಿಕಾರಿ ಹಾಗೂ ನಿರ್ದೇಶಕ ಸಚಿನ್ ಹೆಗ್ಡೆ , ನೂತನ ಕಟ್ಟಡದ ಇಂಜಿನಿಯರ್ ಸುಜಿತ್ ಸಾಲ್ಯಾನ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು 
ಅತಿಕಾರಿಬೆಟ್ಟು  ಗ್ರಾ
ಪಂ. ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್ ಸ್ವಾಗತಿಸಿದರು, ಗಂಗಾಧರ ಶೆಟ್ಟಿ, ಬರ್ಕೆ ತೋಟ ಧನ್ಯವಾದ ಅರ್ಪಿಸಿದರು