Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಪ್ಪನಾಡು: ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸಲು ಭಕ್ತ ಸಮಿತಿ ಆಗ್ರಹ

ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸಬೇಕು ಹಾಗೂ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ದ್ವಿಮುಖ ಸಂಚಾರ ಮಾಡಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಪ್ಪನಾಡು ಭಕ್ತ ವೃಂದದ ಸಮಿತಿ
ವತಿಯಿಂದ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರಿಗೆ ಮಂಗಳವಾರ ಮನವಿ ಮಾಡಿದೆ
 ಬಪ್ಪನಾಡು ದೇವಸ್ಥಾನವು ದಿನದಿಂದ ದಿನಕ್ಕೆ ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು, ಈ ಹಿಂದೆ ಪ್ರವಾಸಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದವು ಆದರೆ
 ದೇವಸ್ಥಾನದ ಎದುರು ಭಾಗ ದ್ವಾರ ಸ್ಥಳಾಂತರ ಕಾಮಗಾರಿ ನಿಧಾನ ಗತಿಯಿಂದ ದೇವಸ್ಥಾನಕ್ಕೆ ಬರುವ ರಸ್ತೆ ಅಗಲ ಕಿರಿದಾಗಿದ್ದು  ದ್ವಿಮುಖ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ವಾಹನಗಳು ನೇರವಾಗಿ ಹೆದ್ದಾರಿಯಲ್ಲಿ ಹೋಗುತ್ತಿದೆ ಇದರಿಂದ ದೇವಸ್ಥಾನದ ಉತ್ಪತ್ತಿಗೂ ತೀವ್ರ ತೊಂದರೆಯಾಗಿದೆ 
ಮುಂದಿನ ತಿಂಗಳು ದಸರಾ ನವರಾತ್ರಿ ಮಹೋತ್ಸವ ಪ್ರಾರಂಭವಾಗುತ್ತಿದ್ದು ಆದಾಯದ ದೃಷ್ಟಿಯಿಂದ ಮತ್ತು ಭಕ್ತರಿಗೆ ಆಗುವ ತೊಂದರೆಗಳನ್ನು ಮನಗಂಡು ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸುವುದು ಹಾಗೂ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಿ  ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಪ್ಪನಾಡು ಭಕ್ತ ವೃಂದದ ವತಿಯಿಂದ ಮನವಿ ಸಲ್ಲಿಸಲಾಯಿತು 
ಈ ಸಂದರ್ಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ  ಶ್ವೇತಾ ಪಳ್ಳಿ ಹಾಗೂ ಭಕ್ತ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಮನವಿ ಪ್ರತಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ, ಮುಲ್ಕಿ ತಾಲೂಕು ತಹಶೀಲ್ದಾರ್, ನಗರ ಪಂಚಾಯಿತಿಗೆ ಹಾಗೂ ಮುಲ್ಕಿ ಪೊಲೀಸ್ ಠಾಣೆಗೆ ನೀಡಲಾಗಿದೆ  ಎಂದು ಪದಾಧಿಕಾರಿಗಳು ತಿಳಿಸಿದ್ದು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ