Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಶಿಕ್ಷಕರು ಮಕ್ಕಳಿಗೆ ಜ್ಞಾನ ನೀಡುವ ದೇವರು-ಕುಲ್ಯಾಡಿ ನರಸಿಂಹ ಪೈ

ಮೂಲ್ಕಿ ಶಾಂಭವಿ ಜೇಸಿ ಟ್ರಸ್ಟ್ ನೇತೃತ್ವದಲ್ಲಿ, ಲಯನ್ಸ್ ಕ್ಲಬ್‌  ಮತ್ತು ಏಳಿಂಜೆ ಸ್ವಾದಿಷ್ಟ್‌ ಫುಡ್ಸ್   ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ “ಶಿಕ್ಷಕರ ಪ್ರತಿಭಾ ಸ್ಫರ್ಧೆ" ಕಾರ್ಯಕ್ರಮ ಭಾನುವಾರ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ದಲ್ಲಿ ನಡೆಯಿತು  
ಶಾಲಾ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಜ್ಞಾನ ನೀಡುವ ದೇವರು, ಶಿಕ್ಷಕರ ಪ್ರತಿಭೆಯ ಅನಾವರಣ ಕಾರ್ಯ ಅಭಿನಂದನೀಯ ಎಂದರು 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷರ ದಿನೇಶ್ ಕೆ. ಶೆಟ್ಟಿ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ಪಾಂಡುರಂಗ ಭಟ್, ಲ ಪ್ರವೀಣ್ ಶೆಟ್ಟಿ,  ನವೀನ್ ಶೆಟ್ಟಿ, ಹರ್ಷರಾಜ್ ಶೆಟ್ಟಿ ಜಿ.ಎಂ., ಮೊಹಮ್ಮದ್ ಹಬೀಬುಲ್ಲಾ, ಶಾಲಾ ಪ್ರಾಂಶುಪಾಲೆ ಕಾಮಾಕ್ಷಿ ಆರ್‍. ನಾಯಕ್, ದೇವಪ್ರಸಾದ ಪುನರೂರು,   ಚಂದ್ರಶೇಖರ್‍ ಶೆಟ್ಟಿ ಕುಬೆವೂರು,  ಯಶಾ ಡಿ. ಶೆಟ್ಟಿ,  ಸುಧೀರ್‍ ಬಾಳಿಗ, ತೀಪುಗಾರರಾದ ಆಜ್ಞಾ, ದಿಲೀಪ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಶಿಕ್ಷಕ, ಕೃಷಿಕ  ಬಿ. ಪಾಂಡುರಂಗ ಶೆಟ್ಟಿ ಬಪ್ಪನಾಡುಗುತ್ತು ರವರನ್ನು ಗೌರವಿಸಲಾಯಿತು. ಟ್ರಸ್ಟ್ ನ ಸದಸ್ಯ ವಿಶ್ವನಾಥ್ ಶೆಣೈ ಧನ್ಯವಾದ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಅಧಿಕ ಶಿಕ್ಷಕ-ಶಿಕ್ಷಕಿಯರು  ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. 
ಫಲಿತಾಂಶ-
 ವ್ಯಾಸಮಹರ್ಷಿ ವಿದ್ಯಾ ಪೀಠ, ಕಿಲ್ಪಾಡಿ ( ಪ್ರ), ಶ್ರೀ ವಾಣಿ ಶಾಲೆ, ಪಾವಂಜೆ (ದ್ವಿ) ಹಾಗೂ  ಮುಲ್ಕಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ (ತೃ) ಸ್ಥಾನವನ್ನು  ಪಡೆಯಿತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಶಾಲೆಗಳನ್ನು ಗೌರವಿಸಲಾಯಿತು