Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ ಸೀಮೆಯ ಅರಸರ ಅಧ್ಯಕ್ಷತೆಯಲ್ಲಿ "ಮುಲ್ಕಿ ಸೀಮೆ ಅರಸು ಕಂಬಳ -ಸರ್ವಾನುಮತದ ನಿರ್ಣಯ

ಮುಲ್ಕಿ: ಮುಲ್ಕಿ ಸೀಮೆ ಅರಸು ಕಂಬಳದ ಬಗ್ಗೆ ಅರಮನೆಯ ಧರ್ಮ ಚಾವಡಿಯಲ್ಲಿ ಸೀಮೆಯ ಅರಸರು, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ  ಮತ್ತು ಕಂಬಳ ಸಮಿತಿಯ ಅಧ್ಯಕ್ಷರಾದ ದುಗ್ಗಣ್ಣ ಸಾವಂತ ಅರಸರ ಅಧ್ಯಕ್ಷತೆಯಲ್ಲಿ ನಡೆದ ಮುಲ್ಕಿ ಸೀಮೆಯ ಅರಸು ಕಂಬಳದ ಸಭೆಯಲ್ಲಿ ನಿರ್ಣಯದಂತೆ ಹಿಂದಿನ ಸಮಿತಿಯನ್ನು ಬರ್ಕಾಸ್ತುಗೊಳಿಸಲಾಗಿದೆ.

ಈ ವರ್ಷದ ಮುಲ್ಕಿ ಸೀಮೆ ಅರಸು ಕಂಬಳವು ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ಮಾರ್ಗದರ್ಶನ,ನಿರ್ದೇಶನ ಹಾಗೂ ಅಧ್ಯಕ್ಷತೆಯಲ್ಲಿ ನಡೆಯಲಿರುವುದು ಎಂದು ಸಮಿತಿ ಸರ್ವಾನುಮತದಿಂದ ನಿರ್ಧರಿಸಿದೆ.

ಸಮಿತಿಯ ಮುಂದಿನ ನಡಾವಳಿಗಳು ಸೀಮೆಯ ಅರಮನೆ ಚಾವಡಿಯಲ್ಲಿ ಮಾತ್ರ ನಡೆಯಲಿದೆ ಎಂದು ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ