Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಿಕ್ಷಕ ಎಂದರೆ ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ವ್ಯಕ್ತಿ’ - ಭಾನುಮತಿ ಶೆಟ್ಟಿ



ಮೂಲ್ಕಿ:ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಆದರೆ ಆಚರಣೆಯ ರೀತಿಯಲ್ಲಿ ಹೊಸತನವನ್ನು ತರುವುದು ಇಂದಿನ ಅಗತ್ಯ.  ಇಲ್ಲಿ ನಡೆಯುತ್ತಿರುವ ‘ಶಿಕ್ಷಕ ಸಪರ್ಯ’ ಅದಕ್ಕೆ ಒಂದು ಉತ್ತಮ ಉದಾಹರಣೆ. ಶಿಕ್ಷಕ ಎಂದರೆ ಕೇವಲ ತರಗತಿಯೊಳಗೆ ಪಾಠ ಮಾಡುವ ವ್ಯಕ್ತಿಯಲ್ಲ; ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ವ್ಯಕ್ತಿ’ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದೇವೆ ಎಂದು ರೋಟರಿ ಕ್ಲಬ್ ಮೂಲ್ಕಿಯ ಅಧ್ಯಕ್ಷೆ  ಭಾನುವತಿ ಶೆಟ್ಟಿ ಹೇಳಿದರು.
ಅವರು  ಶಿಕ್ಷಕರ ದಿನಾಚರಣೆಯ ಅಂಗವಾಗಿ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಮೂಲ್ಕಿ ತಾಲೂಕಿನ ಪದವಿಪೂರ್ವ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕರನ್ನು ಗೌರವಿಸುವ “ಶಿಕ್ಷಕ ಸಪರ್ಯ – 2026” ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ  ಸಾಮಾನ್ಯವಾಗಿ ಶಿಕ್ಷಕರ ದಿನಾಚರಣೆಯಲ್ಲಿ ನಾವು ಶೈಕ್ಷಣಿಕ ಶಿಕ್ಷಕರನ್ನು ಸ್ಮರಿಸುತ್ತೇವೆ. ಆದರೆ ವಿದ್ಯಾರ್ಥಿಗಳ ಆರೋಗ್ಯ, ಶಿಸ್ತು, ಕ್ರೀಡಾ ಪ್ರತಿಭೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ದೈಹಿಕ ಶಿಕ್ಷಣ ನಿರ್ದೇಶಕರ ಸೇವೆಯನ್ನೂ ಗುರುತಿಸುವುದು ಬಹಳ ಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಲ್ಕಿಯ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರುತಿ ಪೂಜಾರಿ, ಮೂಲ್ಕಿಯ ವಿಜಯ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಕೇಶ್ ವಿ. ಕಾಂಚನ್, ಮೂಲ್ಕಿಯ ಮೆಡಲಿನ್ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಿರಣ್ ಕುದ್ರಿಪದವು, ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪುಂಡಲೀಕ ಕೊಠಾರಿ ಅವರನ್ನು ಗೌರವಿಸಲಾಯಿತು.

ಅತಿಥಿಗಳಾದ ಲಯನ್ಸ್ ಕ್ಲಬ್ ಮೂಲ್ಕಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಶುಭಹಾರೈಸಿದರು.
ಜನ ವಿಕಾಸ ಸಮಿತಿ ಮೂಲ್ಕಿಯ ಅಧ್ಯಕ್ಷ ಸುರೇಶ್ ರಾವ್ ಹಾಗೂ ಸದಸ್ಯೆ ಶೋಭಾ ರಾವ್ ಉಪಸ್ಥಿತರಿದ್ದರು. 

ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಕೊಡೆತ್ತೂರು ದಾಮೋದರ ಶೆಟ್ಟಿ ವಂದಿಸಿದರು, ಪ್ರಾಣೇಶ್ ಭಟ್ ದೇಂದಡ್ಕ   ಕಾರ್ಯಕ್ರಮ ನಿರೂಪಿಸಿದರು.