ಮುಲ್ಕಿ:ನಡಿಬೆಟ್ಟು ಶ್ರೀ ಧೂಮಾವತಿ ದೈವದ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ
ಮುಲ್ಕಿ: ಸೀಮೆಯ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ನಡಿಬೆಟ್ಟು ಶ್ರೀ ಧೂಮಾವತಿ ದೈವದ ಬ್ರಹ್ಮಕಲಶೋತ್ಸವ ಮುಂದಿನ ವರ್ಷ ಮಾರ್ಚ್ ನಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ ಸಮಾರಂಭ ಆದಿತ್ಯವಾರ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ದೈವದ ಸನ್ನಿಧಿಯಲ್ಲಿ ಸ್ಥಳವಂದಿಗರ ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು
ಮನವಿ ಪತ್ರ ಬಿಡುಗಡೆ ಮಾಡಿ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ
ಗುತ್ತಿನಾರ್ ಸುಧಾಕರ್ ಯಸ್ ಶೆಟ್ಟಿ ದೆಪ್ಪುಣಿಗುತ್ತು
ಮಾತನಾಡಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳಿಗೆ ದಾನಿಗಳ ಹಾಗೂ ಭಕ್ತಾದಿಗಳ ಸಹಕಾರ ಅಗತ್ಯ ಎಂದರು
ಈ ಸಂದರ್ಭ ಸಮಿತಿಯ ಅಧ್ಯಕ್ಷರಾದ
ಶಿವ ಚಂದ್ರ ಶೆಟ್ಟಿ ದೆಪ್ಪುಣಿಗುತ್ತು,ಮುಂಬೈ ಸಮಿತಿ ಅಧ್ಯಕ್ಷರಾದ ವಿಜಿತ್ ಟಿ ಶೆಟ್ಟಿ ಪುತ್ತೂರು ಬಾಳಿಕೆ ಅಧ್ಯಕ್ಷರು ಹಾಗೂ ಸಮಿತಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು