Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಅಧಿಕಾರಿಗಳಿಂದ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯವಾಗಬೇಕು- ಉಮಾನಾಥ ಕೋಟ್ಯಾನ್

ಮುಲ್ಕಿ:ಕರ್ನಾಟಕ ಸರಕಾರದ ವತಿಯಿಂದ
ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸಕಾಲದಲ್ಲಿ ಸೂಕ್ತ ಸಮಾಧಾನದ ಪರಿಹಾರ ನೀಡುವ ನಿಟ್ಟಿನಲ್ಲಿ  ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಮುಲ್ಕಿ ತಾಲೂಕು ಮಟ್ಟದ “ಪ್ರಜಾ ಸೇವೆ ಆಂದೋಲನ ಸಭೆ" ಮುಲ್ಕಿ ತಾಲೂಕು ಪ್ರಜಾ ಸೌಧದ ಸಭಾಂಗಣದಲ್ಲಿ ಶನಿವಾರ ನಡೆಯಿತು 
ಸಭೆಯನ್ನು ಉದ್ಘಾಟಿಸಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಪ್ರಜಾಸೇವೆ ಕಾರ್ಯಕ್ರಮವು ತಾಲೂಕಿನ ಜನರ ಸಮಸ್ಯೆಗಳಿಗೆ ಆಯೋಜನೆ ಮಾಡಿರುವ ಸರಕಾರದ ಭಾಗವಾಗಿದ್ದು ಅಧಿಕಾರಿಗಳು  ಜನ ಸೇವೆಗೆ ಪ್ರಯತ್ನಿಸಬೇಕು. ಮುಲ್ಕಿ ತಾಲೂಕು ಆಡಳಿತ ಕಚೇರಿಯಲ್ಲಿ ಅನೇಕ ಅವ್ಯವಸ್ಥೆಗಳ ಬಗ್ಗೆ ನನಗೆ ದೂರು ಬಂದಿದ್ದು ಜನರ ದೂರುಗಳಿಗೆ ಅಧಿಕಾರಿಗಳಿಂದ ಸ್ಪಂದಿಸುವ ಕಾರ್ಯವಾಗಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು
ಸಭೆಗೆ ಅಧಿಕಾರಿಗಳ ಗೈರು, ಸೂಕ್ತ ಕ್ರಮಕ್ಕೆ ಸೂಚನೆ 

“ಪ್ರಜಾ ಸೇವೆ ಆಂದೋಲನ ಸಭೆ"ಗೆ ಗೈರು ಹಾಜರಾದ ಅಮೃತ್ ಕುಡಿಯುವ ನೀರಿನ ಯೋಜನೆಯ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸಹಿತ ಅನೇಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಶಾಸಕರು ಸೂಚನೆ ನೀಡಿದರು. ಸಭೆಗೆ  ತಡವಾಗಿ ಹಾಜರಾದ ಮುಲ್ಕಿ ಪೊಲೀಸ್ ಠಾಣೆಯ ಅಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡು, ಠಾಣಾ ವ್ಯಾಪ್ತಿಯಲ್ಲಿ ನಡೆದ ಶ್ರೀ ಕೋರ್ದಬ್ಬು ದೈವಸ್ಥಾನದ ಕಳ್ಳತನದ ಬಗ್ಗೆ ಮಾಹಿತಿ ಪಡೆದು ಹಾಗೂ ಕೂಡಲೇ ತನಿಖೆ ನಡೆಸಿ ಕಳ್ಳರನ್ನು ಬಂಧಿಸಬೇಕು ಎಂದು ಸೂಚನೆ ನೀಡಿದರು. ಇದೇ ರೀತಿ ಸಭೆಗೆ ತಡವಾಗಿ ಆಗಮಿಸಿದ ಮುಲ್ಕಿ ಸಬ್ ರಿಜಿಸ್ಟರ್ ಕಛೇರಿ ಸಿಬ್ಬಂದಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು
 ಸಭೆಯಲ್ಲಿ ಸರ್ವೆ ಇಲಾಖೆಯ ಅಧಿಕಾರಿಯ ಕಾರ್ಯವೈಖರಿ ಬಗ್ಗೆ ಅನೇಕ ದೂರುಗಳು ಬಂದಿರುವ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಾಕೀತು ಮಾಡಿದರು 
 ಪೈಪ್ ಲೈನ್ ನಿಂದ ಹೊಂಡ ಮಯ ಹೆದ್ದಾರಿ ಆಕ್ರೋಶ

ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿ ಅಮೃತ್ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿ ಮಾಡಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಈಶ್ವರ ಕಟೀಲು ಸಭೆಯಲ್ಲಿ  ಆಕ್ರೋಶ ವ್ಯಕ್ತಪಡಿಸಿದರು ಅವರು ಮಾತನಾಡಿ ಕಟೀಲು ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪ್ರಶ್ನೆಸಿದರು 
ಕಿನ್ನಿಗೋಳಿ ಸಮೀಪದ ದಾಮಸ್ ಕಟ್ಟೆ ಬಳಿ ಆರೋಗ್ಯ ಕೇಂದ್ರದ ಉಪ ವಿಭಾಗಕ್ಕೆ ಸರಿಯಾದ ಸ್ಥಳ ಮಂಜೂರು ಮಾಡಿಸಲು ಕೆಮ್ರಾಲ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನ್ಸಿಲ ವಿನಂತಿಸಿದರು.
ಕಟೀಲು ಗ್ರಾಮ ವ್ಯಾಪ್ತಿಯ ಮಲ್ಲಿಗೆಯಂಗಡಿ ಬಳಿ ತಾತ್ಕಾಲಿಕ ನೆಲೆಯಲ್ಲಿ ನ್ಯಾಯಬೆಲೆಯ ಅಂಗಡಿ ಸ್ಥಾಪಿಸುವಂತೆ ಕಿನ್ನಿಗೋಳಿ ಪ.ಪಂ. ಅಧ್ಯಕ್ಷ ಗುರುರಾಜ್  ವಿನಂತಿಸಿದರು
ಮುಲ್ಕಿ ನಗರ ಪಂಚಾಯತ್ ಮಾಜೀ  ಸದಸ್ಯೆ ರಾಧಿಕಾ ಕೋಟ್ಯಾನ್ ಮಾತನಾಡಿ ಸರಕಾರದಿಂದ ಬರುತ್ತಿದ್ದ ವಿಧವಾ ವೇತನ ಸ್ಥಗಿತಗೊಂಡಿದೆ ಎಂದರು
ಕಿನ್ನಿಗೋಳಿ ಪ. ಪಂ ವ್ಯಾಪ್ತಿಯ ಲೋಕೋಪಯೋಗಿ ಹೆದ್ದಾರಿ ಬದಿಯ ಚರಂಡಿ ಹೂಳೆತ್ತಿಲ್ಲ, ಕಿನ್ನಿಗೋಳಿಯಲ್ಲಿ , ಪಾರ್ಕಿಂಗ್ ಸಮಸ್ಯೆ,ಪ. ಪಂ ನಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಸದಸ್ಯ ಪ್ರಕಾಶ್ ಆಚಾರ್ಯ ಪ್ರಸ್ತಾಪಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು 
ಕಳೆದ ಹಲವಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬರುತ್ತಿರುವ ಮುಲ್ಕಿ ಬಸ್ ನಿಲ್ದಾಣದ ಬಳಿಯ ಬೀದಿ ಬದಿ ವ್ಯಾಪಾರಸ್ಥರು ನಗರ ಪಂಚಾಯತ್ ಸೂಚಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಿದರೂ ಸ್ಥಳೀಯ ಬ್ಯಾಂಕಿನವರು
ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪ್ರಾಣೇಶ್  ಹೆಜ್ಮಾಡಿ ಆಕ್ರೋಶ ವ್ಯಕ್ತಪಡಿಸಿದರು
ಮೂಢಾ ಅಧಿಕಾರಿಗಳಿಂದ ಸ್ಪಂದನೆ ಇಲ್ಲ

ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಮೂಢಾ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ, ಮಂಗಳೂರಿನ ಮೂಢಾ ಕಚೇರಿಗೆ ಅಲೆದಾಟ ಮಾಮೂಲಿಯಾಗಿದೆ ಎಂದು ಮಾಜೀ ನ ಪಂ ಸದಸ್ಯ ಹಾಗೂ ವಕೀಲ ರವೀಶ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು 
ಕಿನ್ನಿಗೋಳಿಯಲ್ಲಿ ಫುಟ್ಪಾತ್ ಸಮಸ್ಯೆ, ಸೂಪರ್ ಮಾರ್ಕೆಟ್ ಬಳಿ ಸ್ಲಾಬ್ ಮುರಿದು ಹೋಗಿದ್ದರೂ ಸರಿಪಡಿಸಿಲ್ಲ ಸಂಚಾರ ಅಪಾಯಕಾರಿಯಾಗಿದೆ ಎಂದು ಗಂಗಾಧರ ಎಳತ್ತೂರು ಹೇಳಿದರು 
ಮುಲ್ಕಿ ನ.ಪಂ. ವ್ಯಾಪ್ತಿಯ ಕನಡರಬೆಟ್ಟು ಬಳಿ ವ್ಯಕ್ತಿಯೊಬ್ಬನಿಂದ ಸಾರ್ವಜನಿಕ ರಸ್ತೆ ತಡೆ ಬಗ್ಗೆ ಮಾಜೀ ಅಧ್ಯಕ್ಷ ಸತೀಶ್ ಅಂಚನ್ ಪ್ರಸ್ತಾಪಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು ಸೂಚಿಸಿದ ಸ್ಥಳದಲ್ಲಿ ಸರಕಾರಿ ಬಸ್ ನಿಲ್ದಾಣ ನಿಲುಗಡೆಗೆ ಒತ್ತಾಯ
 ಮುಲ್ಕಿ ನ.ಪಂ ಮಾಜೀ ಸದಸ್ಯ ಭೀಮಾ ಶಂಕರ್ ಮಾತನಾಡಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು,ಮುಲ್ಕಿ, ವಿಜಯ ಸನ್ನಿಧಿ ಜಂಕ್ಷನ್ ಅಪಾಯಕಾರಿಯಾಗಿದ್ದು ಅನೇಕ ಅಪಘಾತಗಳು ಸಂಭವಿಸಿದೆ ಹೆದ್ದಾರಿಯಲ್ಲಿ ಕರ್ತವ್ಯ ನಿರ್ವಹಿಸಲು ಸೂಕ್ತ ಟ್ರಾಫಿಕ್ ಪೊಲೀಸರನ್ನು ನೇಮಿಸಬೇಕು ಹಾಗೂ ಮುಲ್ಕಿ ಬಸ್ ನಿಲ್ದಾಣದ ಬಳಿ ಸರಕಾರಿ ಬಸ್ ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಿದ್ದು ಅಲ್ಲಿಯೇ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು 
ಕಟೀಲು ಬಲ್ಲಾಣದಲ್ಲಿರುವ ತ್ಯಾಜ್ಯ ಘಟಕದ ಹೆಸರಿನಲ್ಲಿರುವ ಸ್ಥಳವನ್ನು ಗೋಮಾಳ ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಈಶ್ವರ ಕಟೀಲ್ ಹೇಳಿದರು 
ಮುಲ್ಕಿ ತಾಲೂಕು ತಹಶಿಲ್ದಾರ್ ಪೃಥ್ವೀ ಸಾನಿಕಂ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ,ಮುಲ್ಕಿ ನ.ಪಂ. ಹಾಗೂ ಕಿನ್ನಿಗೋಳಿ ಪ.ಪಂ ಮುಖ್ಯಾಧಿಕಾರಿಗಳಾದ ಮಧುಕರ್,ಜಯ ಶಂಕರ್ , ತಾಲೂಕು ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಮತ್ತಿತರರು ಉಪಸ್ಥಿತರಿದ್ದು ಜನರ ಸಮಸ್ಯೆಗಳಿಗೆ ಉತ್ತರಿಸಿದರು. ಪಂಚಾಯತ್ ವಿಎ ಆಶಾ ಮೆಹಂದಳೆ ನಿರೂಪಿಸಿದರು