ಮುಲ್ಕಿ: ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ನೂತನ ಪುತ್ತೂರು ಬಾಳಿಕೆ ಮನೆ ಮೈಂದ ಶೆಟ್ಟಿ ಮಹಾದ್ವಾರ ನಿರ್ಮಾಣಕ್ಕೆ ಚಾಲನೆ
ಮುಲ್ಕಿ:ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದಾನಿಗಳಾದ ಪುತ್ತೂರು
ಬಾಳಿಕೆ ಮನೆ ಲತಾ ಸಾಧು ಶೆಟ್ಟಿ ಮತ್ತು ಸಹೋದರರ ಮೂಲಕ ನಿರ್ಮಾಣವಾಗಲಿರುವ
ಪುತ್ತೂರು ಬಾಳಿಕೆ ಮನೆ ಮೈಂದ ಶೆಟ್ಟಿ ಮಹಾದ್ವಾರಕ್ಕೆ ಗುದ್ದಲಿ ಪೂಜೆ ಪಂಜಿನಡ್ಕ ಜಂಕ್ಷನ್ ಬಳಿ ನಡೆಯಿತು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ
ಗೌರವಾಧ್ಯಕ್ಷರುಗಳಾದ ಗುತ್ತಿನಾರ್ ಸುಧಾಕರ ಎಸ್ ಶೆಟ್ಟಿ ದೆಪ್ಪುಣಿ ಗುತ್ತು, ರಾಮದಾಸ್ ಶೆಟ್ಟಿ ಬಾಳಿಕೆ ಮನೆ ವಿಶೇಷ ಪ್ರಾರ್ಥನೆ ಹಾಗೂ ಪ್ರಾಸ್ತಾವಿಕvaagi ಮಾತನಾಡಿದರು
ಈ ಸಂದರ್ಭ ಮುಂಬೈ ಸಮಿತಿಯ ಅಧ್ಯಕ್ಷ ವಿಜಿತ್ ಟಿ ಶೆಟ್ಟಿ ಬಾಳಿಕೆ ಮನೆ, ಅಧ್ಯಕ್ಷರಾದ ಶಿವಚಂದ್ರ ಶೆಟ್ಟಿದೆಪ್ಪುಣಿಗುತ್ತು ಸಮಿತಿಯ ಕಾರ್ಯಾಧ್ಯಕ್ಷ ಜನಾನಂದ ಶೆಟ್ಟಿ, ತಿಂಗೊಳೆ ಮನೆ, ಪ್ರಧಾನ ಕಾರ್ಯದರ್ಶಿ, ಗಂಗಾಧರ ಶೆಟ್ಟಿ ಬರ್ಕೆ ತೋಟ , ಇಂಜಿನಿಯರ್ ಜೀವನ್ ಶೆಟ್ಟಿ ಕಾರ್ನಾಡ್, ಗುತ್ತಿಗೆದಾರ ಹರ್ಷಿತ್ ಹಾಗೂ ಸಮಿತಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು