ಮುಲ್ಕಿ: ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಗಣಪ ಹವನ ಮತ್ತು ಮುಷ್ಟಿ ಕಾಣಿಕೆ ಸಮರ್ಪಣೆ
ಮುಲ್ಕಿ:ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗಣಪ ಹವನ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಭಾನುವಾರ ವೇದಮೂರ್ತಿ ಸುಬ್ರಮಣ್ಯ ಭಟ್ ದೇoದಡ್ಕ ನೇತೃತ್ವದಲ್ಲಿ ನಡೆಯಿತು
ದಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ದ್ವಾದಶ ನಾರಿಕೇಳ ಗಣ ಹವನ, ಪೂರ್ಣಾಹುತಿ, ಪ್ರಸಾದ ವಿತರಣೆ, ಮಧ್ಯಾಹ್ನ 12 ರಿಂದ ಮುಷ್ಟಿ ಕಾಣಿಕೆ ಸಮರ್ಪಣೆ ,12:30 ರಿಂದ ಮಹಾ ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಎಡ್ವಕೇಟ್ ಮಹಾಬಲ ಶೆಟ್ಟಿ, ಮುಂಬೈ ಕ್ರಿಕೆಟ್ ಎಸೋಸಿಯೇಷನ್ ಮಾಜೀ ಅಧ್ಯಕ್ಷ ಪಿ ವಿ ಶೆಟ್ಟಿ, ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರುಗಳಾದ ಗುತ್ತಿನಾರ್ ಸುಧಾಕರ ಎಸ್ ಶೆಟ್ಟಿ ದೆಪ್ಪುಣಿ ಗುತ್ತು, ಜಗದೀಶ್ ಪ್ರಭು ಪಣಿ ಕೆರೆ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಸಮಿತಿಯ ಕಾರ್ಯಾಧ್ಯಕ್ಷ ಜನಾನಂದ ಶೆಟ್ಟಿ, ತಿಂಗೊಳೆ ಮನೆ, ಪ್ರಧಾನ ಕಾರ್ಯದರ್ಶಿ, ಗಂಗಾಧರ ಶೆಟ್ಟಿ ಬರ್ಕೆ ತೋಟ ಮತ್ತಿತರರು ಉಪಸ್ಥಿತರಿದ್ದರು