Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ರೈಲ್ವೇ ನಿಲ್ದಾಣ ರಸ್ತೆ ಅವ್ಯವಸ್ಥೆ- ಸ್ಥಳೀಯ ಸಂಘಟನೆಯಿಂದ ಗಣೇಶೋತ್ಸವದ ಸಂಭ್ರಮದ ಜೊತೆಗೆ ಶ್ರಮದಾನದ ಮೂಲಕ ಕಾರ್ಯಕಲ್ಪ



ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಬಳಿಯಿಂದ ಮುಲ್ಕಿ ರೈಲ್ವೇ ನಿಲ್ದಾಣ ಹಾಗೂ ಕೆಎಸ್ ರಾವ್ ನಗರ ಸಂಪರ್ಕ ರಸ್ತೆ ಕಳೆದ ಹಲವಾರು ವರ್ಷಗಳಿಂದ ತೀರಾ ಹದಗೆಟ್ಟಿದ್ದು  ಸಂಚಾರ ದುಸ್ತರವಾಗಿ ಪರಿಣಮಿಸಿದೆ 
ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆ ಸಂಪೂರ್ಣ ಹೊಂಡಮಯವಾಗಿ ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿರುವುದೇ ಅಲ್ಲದೆ ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಕೂಡ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ದುರಸ್ತಿಯಾಗಿಲ್ಲ 
ಮುಲ್ಕಿಯ ರೈಲ್ವೇ ನಿಲ್ದಾಣಕ್ಕೆ ಹೋಗುವ ಪ್ರಧಾನ ರಸ್ತೆ ಇದಾಗಿದ್ದು ದೂರದ ಮುಂಬೈ, ಗುಜರಾತ್ ಗೋವಾ ಕಡೆಯಿಂದ ಅನೇಕ ಪ್ರಯಾಣಿಕರು ಮುಲ್ಕಿ ರೈಲ್ವೇ ನಿಲ್ದಾಣದಲ್ಲಿ ಇಳಿದು ವಾಹನದಲ್ಲಿ ಸಂಚರಿಸುವಾಗ ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿರುವುದು ಮಾಮೂಲಿಯಾಗಿದೆ ಎಂದು ಸ್ಥಳೀಯರು ಅನೇಕ ಬಾರಿ ಸಂಬಂಧಪಟ್ಟ ಆಡಳಿತದ ಗಮನ ಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ 
ಈ ರಸ್ತೆ ಅವ್ಯವಸ್ಥೆ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಕೆಎಸ್ ರಾವ್ ನಗರ ಅಯ್ಯಪ್ಪ ಶಿಬಿರ ಭಕ್ತ ಸಮಿತಿ ಸದಸ್ಯರು ಅಧ್ಯಕ್ಷರಾದ ಜೀವನ್, ಮಾಜೀ ನಗರ ಪಂಚಾಯತ್ ಸದಸ್ಯ ಮುನ್ನಾ ಯಾನೆ ಮಹೇಶ್, ಕೆಎಸ್ ರಾವ್ ನಗರ ಆಟೋ ಚಾಲಕರ ಸಂಘದ ಅಧ್ಯಕ್ಷ ವಿಶುಕುಮಾರ್, ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಆರ್ ಕೆ ಹಾಗೂ  ಮತ್ತಿತರರು ಸೇರಿಕೊಂಡು ರಸ್ತೆ ಹೊಂಡಕ್ಕೆ ಜಲ್ಲಿ ಮಿಶ್ರಿತ ಹುಡಿ ಹಾಕಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆ ದುರಸ್ತಿಗೊಳಿಸಿದ್ದಾರೆ 
ಗಣೇಶೋತ್ಸವದ ಸಂದರ್ಭದಲ್ಲಿ ಉತ್ಸವ ಆಚರಿಸುವುದರ ಜೊತೆಗೆ ಶ್ರಮಧಾನದ ಮೂಲಕ ರಸ್ತೆ ದುರಸ್ತಿ ಮಾಡಿ ಮಾದರಿಯಾಗಿದ್ದಾರೆ.