ಮುಲ್ಕಿ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
ಡಾ. ಪ್ರೇಮಲತಾ ಪೂಂಜಾ ಹಾಗೂ ಎಂ. ಆರ್. ರಮೇಶ್ ಪೂಂಜಾ ಸ್ಮರಣಾರ್ಥ ಹಾಗೂ
ಡಾ. ಸುಪ್ರಿಯಾ ಎ. ರೈ ಪ್ರಾಯೋಜಿತ ಮುಲ್ಕಿ ರಾಮಕೃಷ್ಣ ಪೂಂಜಾ ಚಾರಿಟೇಬಲ್ ಟ್ರಸ್ಟ್ ನಿಂದ ಅನುಷ್ಠಾನಗೊಂಡ ಸುಮಾರು 15 ಲಕ್ಷ ವೆಚ್ಚದ ನೂತನ ಕಂಪ್ಯೂಟರ್ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು
ಸುಪ್ರಜಿತ್ ಇಂಜಿನಿಯರಿಂಗ್ ಲಿ. ನ ನಿರ್ದೇಶಕರು ಮತ್ತು ಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ಸುಪ್ರಿಯಾ ಎ. ರೈ ಮತ್ತು ಕೆ ಅಜಿತ್ ಕುಮಾರ್ ರೈ ರವರು
ನೂತನ ಕಂಪ್ಯೂಟರ್ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿದರು
ಬಳಿಕ ಕೆ ಅಜಿತ್ ಕುಮಾರ್ ರೈ ರವರು ಮಾತನಾಡಿ ಸರಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು , ಶಾಲೆಯ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಕೈಜೋಡಿಸುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಾಧಕರಾಗಿ ಎಂದರು
ಗೌರವ ಅತಿಥಿಗಳಾಗಿ
ಮುಲ್ಕಿ ರಾಮಕೃಷ್ಣ ಪೂಂಜಾ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ,
ಎಂ. ಎಚ್. ಅರವಿಂದ ಪೂಂಜಾ, ಟ್ರಸ್ಟಿ ಆದಿತ್ಯ ಪೂಂಜಾ,ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ , ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲ ಡಾ ವಾಸುದೇವ ಬೆಳ್ಳೆ,ಪ್ರೌಡ ಶಾಲಾ ಶಿಕ್ಷಕಿ ಜಯಲಕ್ಷ್ಮಿ, ಉದ್ಯಮಿ ಎಂ. ಬಿ.ಖಾನ್,
ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ಸತೀಶ್ ಅಂಚನ್,ಮಾಜೀ ಸದಸ್ಯರಾದ ಹರ್ಷರಾಜ ಶೆಟ್ಟಿ,ನಿವೃತ್ತ ಉಪನ್ಯಾಸಕ ವೈ. ಎನ್ ಸಾಲ್ಯಾನ್, ಭಾನುಮತಿ ಶೆಟ್ಟಿ ಕಕ್ವಗುತ್ತು,ಭಾಸ್ಕರ್ ಶೆಟ್ಟಿಗಾರ್ ಕೆಂಚನಕರೆ,ನವೀನ್ ರಾಜ್,ಅಶೋಕ್ ಜನನಿ ಮತ್ತಿತರರು ಉಪಸ್ಥಿತರಿದ್ದರು
ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಸ್ವಾಗತಿಸಿದರು, ಉಪನ್ಯಾಸಕಿ ರೇಖಾ ಬಿ.ಎಸ್ ನಿರೂಪಿಸಿದರು