ಮುಲ್ಕಿ: ಶಿಮಂತೂರು ಕ್ಷೇತ್ರದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ-ಶ್ರೀ ಕೃಷ್ಣದೇವರಿಗೆ ಅರ್ಘ್ಯ ಪ್ರಧಾನ
ಮುಲ್ಕಿ:ಶಿಮಂತೂರು ಆದಿ ಜನಾರ್ದನ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯಿತು
ಶುಕ್ರವಾರ ಮಧ್ಯರಾತ್ರಿ 12.10ಕ್ಕೆ ಈ ದೇವರಿಗೆ ವಿಶೇಷ ಪೂಜೆ ನಡೆದು -ಶ್ರೀ ಕೃಷ್ಣದೇವರಿಗೆ ಅರ್ಘ್ಯ ಪ್ರಧಾನ ನಡೆಯಿತು
ಈ ಸಂದರ್ಭ ಶಿಮಂತೂರು ಯುವಕ ಮಂಡಲ ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು
ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪಾ ಭಟ್, ಶಶಿಕಲಾ ಎನ್ ಕುಂದರ್, ನಂದನ ಶೆಟ್ಟಿ ಕುಬೆವೂರು, ಹಾಗೂ ಉದಯ ಕುಮಾರ್ ಶೆಟ್ಟಿ ಅಧಿಧನ್,ಕಿರಣ್ ಶೆಟ್ಟಿ ನಿತ್ಯಾನಂದ ಶೆಟ್ಟಿ , ಪ್ರಬಂಧಕ ಜಯ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು