ಮುಲ್ಕಿ:ಪಾವಂಜೆ ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಸನ್ನಿಧಿಯಲ್ಲಿ ವಿಜೃಂಭಣೆಯ ಶ್ರೀ ಕೃಷ್ಣ ಜನ್ಮಾಷ್ಟಮಿ
ಮುಲ್ಕಿ: ಹಳೆಯಂಗಡಿ ಸಮೀಪದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಶುಕ್ರವಾರ ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು
ಬೆಳಿಗ್ಗೆ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಶ್ರೀ ದೇವರಿಗೆ ನವಕಾಭಿಷೇಕ,
ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಗೆ
ತುಳಸಿ ಅಲಂಕಾರ, ಭಕ್ಷ್ಯಾಲಂಕಾರ,,ಪರಂಪರಾ ಯಕ್ಷಗಾನ ವೇಷಾಲಂಕಾರ ವಸ್ತ್ರಾಲಂಕಾರ(ಮಥುರೆಯಿಂದ ತಂದ ವಸ್ತ್ರಾಭರಣಗಳಿಂದ)
ಪುಷ್ಪಾಲಂಕಾರ
ಸಂಜೆ 5 ರಿಂದ ಸರ್ವಾಲಂಕಾರ ನಡೆಯಿತು ಹಾಗೂ ಶ್ರೀ ಗೋಪಾಲಕೃಷ್ಣ ಪಾಂಡುರಂಗಸ್ವಾಮಿಗೆ ಪಾರಾಯಣ, ಯಕ್ಷಗಾನ, ಭಗವದ್ಗೀತೆ, ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಸಹಿತ ವಿಶೇಷ ಕಲಾ ಆರಾಧನೆ ,ಪ್ರಸಾದ ವಿತರಣೆ ನಡೆಯಿತು
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು
ಮುಲ್ಕಿ ಪರಿಸರದ ದೇವಸ್ಥಾನಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜನಂಭಣೆಯಿಂದ ನಡೆಯಿತು