ಶಿಮಂತೂರು:ತುಳುನಾಡಿನ ಸಂಸ್ಕೃತಿ ಉಳಿಸಲು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಉತ್ತಮ ಕಾರ್ಯ-ಡಾ. ಕೆ ಪ್ರಕಾಶ್ ಶೆಟ್ಟಿ
ಮುಲ್ಕಿ: ಮುಲ್ಕಿ ಸುಂದರಾಮ್ ಶೆಟ್ಟಿ ಮುಲ್ಕಿ ಭಾಗದಲ್ಲಿ ಅನೇಕ ಶೈಕ್ಷಣಿಕ ಸಾಮಾಜಿಕ, ಕಾರ್ಯಕ್ರಮಗಳನ್ನು ನಡೆಸಿ ಜನತೆಗೆ ದಾರಿದೀಪವಾಗಿದ್ದಾರೆ, ಒಳ್ಳೆಯ ಮನಸ್ಸಿನಲ್ಲಿ ಸಮಾಜಸೇವೆ ಮಾಡಿದರೆ ದೇವರು ಪ್ರತಿಫಲ ನೀಡುತ್ತಾನೆ ದೇವಸ್ಥಾನದ ಅಭಿವೃದ್ಧಿಗೆ ದಾನಿಗಳ ಹಾಗೂ ಭಕ್ತರ ಸಹಕಾರ ಯಾವತ್ತೂ ಇರುತ್ತದೆ ತುಳುನಾಡಿನ ಸಂಸ್ಕೃತಿ ಉಳಿಸಲು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಉತ್ತಮ ಕಾರ್ಯವಾಗಿದ್ದು ನಿರಂತರವಾಗಿ ನಡೆಯಲಿ ಎಂದು ಬೆಂಗಳೂರು ಎಂ ಆರ್ ಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ ಹೇಳಿದರು
ಅವರು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಗುರುವಾರ ನೂತನವಾಗಿ ನಿರ್ಮಾಣಗೊಂಡಿರುವ ಭೋಜನ ಶಾಲೆ, ಹಾಗೂ ವಿಶಾಲ ಸಭಾಂಗಣದ ಲೋಕಾರ್ಪಣಾ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಅಧ್ಯಕ್ಷತೆಯನ್ನು ಮಾಜೀ ಸಚಿವ ಅಭಯ ಚಂದ್ರ ಜೈನ್ ವಹಿಸಿ ದೇವಸ್ಥಾನದ ನೂತನ ಸೌರ ವಿದ್ಯುತ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು
ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನವು ಅಭಿವೃದ್ಧಿಯತ್ತ ಸಾಗುತ್ತಿದ್ದು ಸವಲತ್ತುಗಳನ್ನು ಒದಗಿಸಲು ಮನವಿ ಮಾಡಿದರು
ದೇವಸ್ಥಾನದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಆಶೀರ್ವಚನ ನೀಡಿದರು
ಕಾರ್ಯಕ್ರಮದ
ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಭಟ್, ಪುರುಷೋತ್ತಮ ಭಟ್ ,ಅಡ್ವೊಕೇಟ್ ಮಹಾಬಲ ಶೆಟ್ಟಿ, ಮುಂಬೈ ಕ್ರಿಕೆಟ್ ಎಸೋಸಿಯೇಷನ್ ಮಾಜೀ ಅಧ್ಯಕ್ಷ ಡಾ. ಪಿ ವಿ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರ್ಯಾರ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು,
ಡಾ.ಶುಕ್ಲ ಸುರೇಂದ್ರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
ಕಾಮೇಶ್ವರೀ ವಿಷ್ಣುಮೂರ್ತಿ ಭಟ್ ಪ್ರಾರ್ಥಿಸಿದರು
ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪ ವಿಷ್ಣುಮೂರ್ತಿ ಭಟ್, ನಂದನಾ ಕುಬೆವೂರು ಧನ್ಯವಾದ ಅರ್ಪಿಸಿದರು
ಉಪನ್ಯಾಸಕ ವಿಶ್ವನಾಥ್ ರಾವ್ ನಿರೂಪಿಸಿದರು,
ಕಾರ್ಯಕ್ರಮದಲ್ಲಿ ದಾನಿಗಳ ನೆಲೆಯಲ್ಲಿ ಅಡ್ವೊಕೇಟ್ ಮಹಾಬಲ ಶೆಟ್ಟಿ ರವರನ್ನು ಪತ್ನಿ ಶಾಲಿನಿ ಶೆಟ್ಟಿ ಜೊತೆ ಸನ್ಮಾನಿಸಲಾಯಿತು ಹಾಗೂ ಸಭಾಂಗಣದ ಗುತ್ತಿಗೆದಾರ ನಿತಿನ್ ಕೆ ಶೆಟ್ಟಿ ಕುಬೆವೂರು ರವರನ್ನು ಗೌರವಿಸಲಾಯಿತು