Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ ವಿಜಯಾ ಕಾಲೇಜಿನಲ್ಲಿ ಒಂದು ದಿನದ ಇತಿಹಾಸ ವಿಚಾರ ಸಂಕಿರಣ

ಮುಲ್ಕಿ:ವ್ಯಕ್ತವಾದ ಇತಿಹಾಸದ ಸಂಗತಿಗಳಲ್ಲದೆ, ಅವ್ಯಕ್ತವಾದ ಮರೆಮಾಚಿದ ನಿಗೂಢವಾದ ಹಲವು ಕುತೂಹಲಕರವಾದ ಸಂಗತಿಗಳನ್ನು ತಮ್ಮ ಇತಿಹಾಸದ ಸಂಶೋಧನೆಗಳಲ್ಲಿ ಅನಾವರಣಗೊಳಿಸುತ್ತಿದ್ದ ಡಾ. ಕೆ ಜಿ ವಸಂತ ಮಾಧವರು ಪಂಡಿತ ಋಷಿ ಪರಂಪರೆಯ ಕೊನೆಯ ಕೊಂಡಿ. ಎಂದು  ಡಾ. ಮಾಲತಿ ಕೃಷ್ಣಮೂರ್ತಿ ಹೇಳಿದರು
 ಅವರು ಮುಲ್ಕಿ ವಿಜಯಾ ಕಾಲೇಜಿನಲ್ಲಿ ಆಯೋಜಿಸಿದ ಒಂದು ದಿನದ ಇತಿಹಾಸ ವಿಚಾರ ಸಂಕಿರಣದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು
ಮುಲ್ಕಿ ವಿಜಯ ಕಾಲೇಜು, ಮುಲ್ಕಿಯ ಆಂತರಿಕ ಗುಣಮಟ್ಟ ಖಾತರಿಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘದ ಸಹಯೋಗದಲ್ಲಿ ಖ್ಯಾತ ಇತಿಹಾಸ ಸಂಶೋಧಕ ಹಾಗೂ ಪ್ರಾಧ್ಯಾಪಕರಾಗಿದ್ದ ಡಾ. ಕೆ.ಜಿ. ವಸಂತ ಮಾಧವರ ಕುಟುಂಬಿಕರು ಮಂಗಳವಾರ ಮುಲ್ಕಿ ವಿಜಯ ಕಾಲೇಜಿನಲ್ಲಿ ಆಯೋಜಿಸಿದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು
ಕಾರ್ಯಕ್ರಮದ ಉದ್ಘಾಟನೆಯನ್ನು ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ನೆರವೇರಿಸಿದರು
 ಅಧ್ಯಕ್ಷತೆಯನ್ನು ವಿಜಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ವೈ.ವಿ. ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ,  ನಿವೃತ್ತ ಪ್ರಾಧ್ಯಾಪಕ ಡಾ. ಎಸ್. ಪದ್ಮನಾಭ ಭಟ್, ಮಂಗಳೂರು ವಿಶ್ವವಿದ್ಯಾನಿಲಯ ಇತಿಹಾಸ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಗೋಪಾಲ ಕೆ ,ಡಾ. ಕೆ ಜಿ ವಸಂತ ಮಾಧವರ ಕುಟುಂಬಿಕರಾದ  ನಟೇಶ್ ಕೊಡಂಚ, ನಮಿತಾ ಅನಂತ ಮತ್ತು ಶ್ರೀ ಎಸ್ ಅನಂತ, ಕಾರ್ಯಕ್ರಮದ ಸಂಚಾಲಕಿ  ಭಾರತಿ ಪಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
 ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಪ್ರೊ. ವೆಂಕಟೇಶ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶರ್ಮಿಳಾ ರಾಜೇಶ್ ವಂದಿಸಿದರು. ಉಪನ್ಯಾಸಕಿ ಆಜ್ಞಾ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ ಮಾಡಬಹುದು.......
 “ಭೂತಕಾಲವನ್ನು ಸಂರಕ್ಷಿಸಿ, ಭವಿಷ್ಯಕ್ಕೆ ಸ್ಪೂರ್ತಿ ನೀಡಿ” ಎಂಬ ಆಶಯದೊಂದಿಗೆ ನಡೆದ  ವಿಚಾರ ಸಂಕಿರಣವು ಇತಿಹಾಸದ ಅಧ್ಯಯನ, ಸಂಶೋಧನೆ ಹಾಗೂ ಸಮಾಜದಲ್ಲಿ ಇತಿಹಾಸದ ಮಹತ್ವದ ಕುರಿತು ಚಿಂತನೆಗೆ ವೇದಿಕೆಯಾಯಿತು ಹಾಗೂ
ವಿಚಾರ ಸಂಕಿರಣದಲ್ಲಿ ಮೂರು ಪ್ರಮುಖ ಗೋಷ್ಠಿಗಳು ನಡೆದವು.