ಮುಲ್ಕಿ:ಶಿಮಂತೂರು ದೇವಳದಲ್ಲಿ ವಿಜೃಂಭಣೆಯ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ
ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಗುರುವಾರ ಸಾರ್ವಜನಿಕ ಲಕ್ಷ ತುಳಸಿ ಅರ್ಚನೆ ವಿಜೃಂಭಣೆಯಿಂದ ನಡೆಯಿತು
ದಾರ್ಮಿಕ ಕಾರ್ಯಕ್ರಮಕ್ಕೆ ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು
ಈ ಸಂದರ್ಭ ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್,ಶ್ರೀನಿವಾಸ್ ಭಟ್ ಪರೆಂಕಿಲ, ವಿಷ್ಣುಮೂರ್ತಿ ಭಟ್, ಮಾಜೀ ಸಚಿವ ಅಭಯ ಚಂದ್ರ ಜೈನ್,
ಎಂ ಆರ್ ಜಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಕೆ ಪ್ರಕಾಶ್ ಶೆಟ್ಟಿ, ಮುಂಬೈ ಕ್ರಿಕೆಟ್ ಎಸೋಸಿಯೇಷನ್ ಮಾಜೀ ಅಧ್ಯಕ್ಷ ಪಿವಿ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಮಣ್ಯ ಪ್ರಸಾದ್ ಕೊರ್ಯಾರ್,ಕ್ಷೇತ್ರದ ಆಡಳಿತ ಮೊಕ್ತಸರ ಉದಯಕುಮಾರ್ ಶೆಟ್ಟಿ,
ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪಾ ವಿಷ್ಣುಮೂರ್ತಿ ಭಟ್, ನಂದನಾ ಶೆಟ್ಟಿ ಕುಬೆವೂರು, ಶೇಖರ್ ಶಶಿಕಲಾ ಎನ್ ಕುಂದರ್, ಶಾಂತರಾಮ ಶೆಟ್ಟಿ ತೆಂಗಾಳಿ, ಅರುಣ್ ಕುಮಾರ್, ಉದಯಕುಮಾರ್ ಶೆಟ್ಟಿ ಅಧಿಧನ್ ,ಬಾಲಕೃಷ್ಣ ಶೆಟ್ಟಿ ಅಂಬೆಲಬೀಡು,, ಸುರೇಶ್ ಶೆಟ್ಟಿ , ಶಿಮಂತೂರು ಶ್ರೀ ಆದಿ ಜನಾರ್ದನ ಯುವಕ ಮಂಡಲ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.