Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕುಬೆವೂರು: ಮಕ್ಕಳು ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ ಉಳಿಸಿ, ಬೆಳೆಸಿ-ಭಾನುಮತಿ ಶೆಟ್ಟಿ ಕಕ್ವಗುತ್ತು

ಮುಲ್ಕಿ: ತುಳು ಭಾಷೆ ಉನ್ನತಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮಕ್ಕಳು ದೈನಂದಿನ ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ ಉಳಿಸಿ, ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ತುಳು ವರ್ಲ್ಡ್ ಫೌಂಡೇಶನ್ ಕಟೀಲು ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಹೇಳಿದರು 
ಅವರು ಕುಬೆವೂರು
ಶ್ರೀ ಜಾರಂದಾಯ ಸೇವಾ ಮಿತ್ರ ಮಂಡಳಿ ಹಾಗೂ ಮಹಿಳಾ ಮಂಡಳಿ ವತಿಯಿಂದ  ಶ್ರೀ ಜಾರಂದಾಯ ದೈವಸ್ಥಾನದ ಸಭಾಭವನದಲ್ಲಿ
 ಸೋಮವಾರ ಸಂಜೆ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ ಕೆಂಚನಕೆರೆ ವಹಿಸಿದ್ದರು 
ಮುಖ್ಯ ಅತಿಥಿಗಳಾಗಿ ಹಿರಿಯರಾದ ಶಂಭು ಶೆಟ್ಟಿ ಕುಬೆವೂರುಗುತ್ತು, ಸಮಿತಿಯ ಗೌರವಾಧ್ಯಕ್ಷ  ಮುರಳೀಧರ ಭಂಡಾರಿ, ಸದಸ್ಯರಾದ ಅಶ್ವಿನ್ ಆಳ್ವ, ಕೃಷ್ಣ ಶೆಟ್ಟಿ, ಜಯ ಕುಮಾರ್, ಚಂದ್ರಶೇಖರ್ ಶೆಟ್ಟಿ, ಪ್ರಕಾಶ್ ಶೆಟ್ಟಿ,ಸೇವಾ ಮಿತ್ರ ಮಂಡಳಿ ಅಧ್ಯಕ್ಷ ನಾಗೇಂದ್ರ,ಮಹಿಳಾ ಮಂಡಳಿ ಅಧ್ಯಕ್ಷೆ ವೇದಾವತಿ ಮತ್ತಿತರರು ಉಪಸ್ಥಿತರಿದ್ದರು 
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ನಾರಾಯಣ್ ರೈ ಕುಬೆವೂರು ಹಾಗೂ ಯಕ್ಷಗಾನ ಕಲಾವಿದ, ಕೃಷಿಕ, ದೈವಾರಾಧಕ ಸುರೇಶ್ ಕೊಲಕಾಡಿ ರವರನ್ನು ಸನ್ಮಾನಿಸಲಾಯಿತು ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಸಮಿತಿಯ ವಿಜಯಕುಮಾರ್ ಕುಬೆವೂರು ನಿರೂಪಿಸಿದರು.