Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಸಿಹಿತ್ಲು: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧಕರಾಗಬೇಕು-ಜಯಂತಿ ಬಂಗೇರ

ಮುಲ್ಕಿ:ಸಸಿಹಿತ್ಲು ಉತ್ಥಾನ ಬಳಗ ಸೇವಾ ಟ್ರಸ್ಟ್ ಆಶ್ರಯದಲ್ಲಿ  ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಭಾನುವಾರ ಸಂಸ್ಥೆಯ ಸಭಾ ಭವನದಲ್ಲಿ  ನಡೆಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಯಂತಿ ಬಂಗೇರ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದಿಂದ ದೂರವಿದ್ದು ಉತ್ತಮ ಗುಣಗಳನ್ನು ಬೆಳೆಸಿಕೊಂಡು ಶೈಕ್ಷಣಿಕ ಸಾಧಕರಾಗಬೇಕು ಎಂದರು
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಟ್ರಸ್ಟಿಗಳಾದ ಡಾ.ಶ್ರೀಕಾಂತ್ ರಾವ್, ಹೇಮಚಂದ್ರ ಶೆಟ್ಟಿಗಾರ್,
 ರಂಜಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಇಂದುಶ್ರೀ ದತ್ತಿ ನಿಧಿ,ದಿ|| ನಾರಾಯಣ ರಾವ್ , ದಿ|| ಭಾಸ್ಕರ್ ಸಾಲ್ಯಾನ್, ದಿ|| ಮೋಹನ್ ರಾವ್ ಬೆಂಗಳೂರು,  ದಿ|| ಕಮಲಾಕ್ಷಿ ಕೇಶವ ಶ್ರೀಯಾನ್  ಸ್ಮರಣಾರ್ಥ ಹಾಗೂ ಮತ್ತಿತರರ ಸಹಕಾರದಿಂದ ಸುಮಾರು3 ಲಕ್ಷ ವೆಚ್ಚದಲ್ಲಿ  40 ವಿದ್ಯಾರ್ಥಿಗಳಿಗೆ ಹಾಗೂ  ಸಮಾಜದ ಆಶಕ್ತ ಬಂಧುಗಳಿಗೂ ಆರ್ಥಿಕ ಸಹಕಾರ ನೀಡಲಾಯಿತು.ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಲಾಯಿತು.mattu ಸಂಸ್ಥೆ ವತಿಯಿಂದ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.