ಮುಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಜೃಂಭಣೆಯ ಅನಂತವೃತ (ನೋಂಪಿ)
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಾತಕಾಲ ಕ್ಷೇತ್ರದ ಅರ್ಚಕರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಪಲ್ಲಕ್ಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ಮುಲ್ಕಿ ಶಾಂಭವೀ ನದಿಯಲ್ಲಿ ಭಕ್ತವೃಂದದಿಂದ ಪವಿತ್ರಸ್ನಾನ, ಗಂಗಾ ಅರ್ಚನೆ,ಸ್ವರ್ಣ ಕಲಶ ಪೂರಣ ನಡೆಯಿತು
ಬಳಿಕ ಪಲ್ಲಕ್ಕಿಯಲ್ಲಿ ಪೇಟೆ ಸವಾರಿ ಮತ್ತು ಅನಂತವೃತ ಕಥಾಶ್ರವಣ ನಡೆಯಿತು.ಈ ಸಂದರ್ಭ ಶ್ರೀಕ್ಷೇತ್ರದ ಅರ್ಚಕವರ್ಗ, ಆಡಳಿತ ಸಮಿತಿ,ಭಜಕವೃಂದ ಹಾಜರಿದ್ದರು.