ಎಲ್ಲಾ ಭಾಷೆಗಳನ್ನು ಸಮಾನವಾಗಿ ಹಾಗೂ ಯಾವುದೇ ಭೇದಭಾವವಿಲ್ಲದೆ ಗೌರವಿಸಿ - ಡಾ. ಶೈಲಜಾ ವೈ.ವಿ
ಮುಲ್ಕಿ,:ಎಲ್ಲಾ ಭಾಷೆಗಳನ್ನು ಸಮಾನವಾಗಿ ಹಾಗೂ ಯಾವುದೇ ಭೇದಭಾವವಿಲ್ಲದೆ ಗೌರವಿಸಬೇಕು ಎಂದು ಮುಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ವೈ.ವಿ. ಹೇಳಿದರು
ಅವರು ಹಿಂದಿ ದಿನಾಚರಣೆಯ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಹಿಂದಿ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಸುರತ್ಕಲ್ ಎನ್.ಐ.ಟಿ.ಕೆ.ಯ ರಾಜಭಾಷಾ ವಿಭಾಗದ ಅಧಿಕಾರಿ ನಿಖಿತಾ ಕೆ. ಮಾತನಾಡಿ ಪದವಿ ಹಂತದಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿದವರಿಗೆ ದೊರೆಯಬಹುದಾದ ವಿವಿಧ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಹಿಂದಿ ದಿವಸದ ಮಹತ್ವವನ್ನು ವಿವರಿಸಿದರು.
ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ದೀಪಿಕಾ ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದಿ ದಿವಸದ ಮಹತ್ವವನ್ನು ವಿವರಿಸಿದರು.
ಗ್ರಂಥಪಾಲಕರಾದ ಅರ್ಚನಾ ರಾವ್ ಹಾಗೂ ವಿನುತಾ ಉಪಸ್ಥಿತರಿದ್ದರು.
ರೆಬೆಕಾ ಸ್ವಾಗತಿಸಿದರು ಹಾಗೂ ಕ ರಿಹಣ ಧನ್ಯವಾದ ಅರ್ಪಿಸಿದರು ಶ್ರೀ ಲಕ್ಷ್ಮಿ ನಿರೂಪಿಸಿದರು.
.