ಕವಿ ಭಗವಾನ್‌ದಾಸ್ ಶರ್ಮ ನಿಧನ -ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ತೀವ್ರ ಸಂತಾಪ
ಮೂಲ್ಕಿ: ಬಪ್ಪನಾಡು ಬ್ರಾಹ್ಮಣರ ಕೇರಿ ಹರಿದಾಸ ನಿಲಯ ನಿವಾಸಿ ಭಗವಾನ್ ದಾಸ್ ಶರ್ಮ (94) ಅಲ್ಪ ಸಮಯದ ಅನಾರೋಗ್ಯದಿಂದ ಮುಕ್ಕ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ಅವರು ಔಷದ ವಿತರಣಾ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.ಕವಿ ಪಾವಂಜೆ ಲಕ್ಷ್ಮೀನಾರಾಯಣ ರವರ ಮೊಮ್ಮಗ,ಹರಿದಾಸ ಬಪ್ಪನಾಡು ವೆಂಕಟಕೃಷ್ಣಯ್ಯ ರವರ ಮಗನಾಗಿ ದಾಸ ಸಾಹಿತ್ಯದ ಅಭಿರುಚಿ ಹೊಂದಿದ್ದ ಅವರು ಕವಿಗಳಾಗಿ 'ಭಗವನ್ನುತ' ಕಾವ್ಯನಾಮದಲ್ಲಿ ಹಲವಾರು ಭಜನಾ ಗೀತೆಗಳು ದೇವರ ಸ್ತುತಿಗಳನ್ನು ರಚಿಸಿದ್ದರು. ಭಜನಾ ಪುಸ್ತಕ ಹಾಗೂ ಸಿಡಿ ಪ್ರಕಟಿಸಿದ್ದರು. ಮೂಲ್ಕಿ ಕಟ್ಟದಂಗಡಿ ಯುವಕ ವೃಂದದ ಭಜನಾ ತಂಡಲ್ಲಿ ಹಿರಿಯ ಗಾಯಕರಾಗಿ ದಶಕಗಳ ಕಾಲ ಜಿಲ್ಲೆ ಹಾಗೂ ಹೊರ ಪ್ರದೇಶದಲ್ಲಿ ಭಜನಾ ಸಂಕೀರ್ಥನೆಯನ್ನು ನಡೆಸಿದ್ದಾರೆ.ಅವರಿಗೆ ಹಲವ ಪ್ರಶಸ್ತಿ ಪುರಸ್ಕಾರಗಳೊಂದಿಗೆ ಸಾಹಿತ್ಯ ಪರಿಷತ್ತಿನ ಪುರಂದರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಅವರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸಂಸ್ಥೆಯ ಮಾಜೀ ಅಧ್ಯಕ್ಷ ಬಿ. ಶಿವ ಪ್ರಸಾದ್ ಸಹಿತ
3 ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು, ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಬಪ್ಪನಾಡು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅಭಿವೃದ್ಧಿ ಸಮಿತಿಯ ಸುನಿಲ್ ಆಳ್ವ,ಡಾ. ಹರಿಶ್ಚಂದ್ರ ಪಿ ಸಾಲ್ಯಾನ್,ಲ.ವೆಂಕಟೇಶ್ ಹೆಬ್ಬಾರ್, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ,ಮುಲ್ಕಿ ವಿಜಯಾ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ,
ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬರ್ನಾಡ್, ಉದಯಕುಮಾರ್ ಶೆಟ್ಟಿ ಅಧಿಧನ್, ಮುಲ್ಕಿ ನಗರ ಪಂಚಾಯತ್ ಮಾಜೀ ಅಧ್ಯಕ್ಷ ಸತೀಶ್ ಅಂಚನ್,ಮಾಜೀ ಸದಸ್ಯರಾದ ಪುರುಷೋತ್ತಮ ಬಡಗುಹಿತ್ಲು,ದಯಾವತಿ ಅಂಚನ್ ,ಕೃಷ್ಣರಾಜ್ ಬಪ್ಪನಾಡು , ವಾಸು ಪೂಜಾರಿ ಚಿತ್ರಾಪು,
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ