ಅಕ್ರಮ ಜಾನುವಾರು ಸಾಗಾಟ-ಇಬ್ಬರ ಬಂಧನ
ಮುಲ್ಕಿ: ಉತ್ತರ ಕರ್ನಾಟಕದ ಹಾವೇರಿಯಿಂದ ಕೇರಳದ ಕಾಸರಗೋಡು ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಈಚರ್ ವಾಹನವನ್ನು ಮುಲ್ಕಿ ಪೊಲೀಸರು
ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ದ್ವಾರದ ಬಳಿ ಪತ್ತೆ ಹಚ್ಚಿದ್ದು , ಈಚರ್ ವಾಹನದಲ್ಲಿದ್ದ ಆರೋಪಿಗಳಾದ ಚಾಲಕ ಹಾಗೂ ನಿರ್ವಾಹಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಆರೋಪಿಗಳನ್ನು ಹಾವೇರಿ ನಿವಾಸಿಗಳಾದ ಈಚರ್ ವಾಹನದ ಚಾಲಕ ಮಹಾಂತೇಶ್ (26) ಹಾಗೂ ನಿರ್ವಾಹಕ ರಾಜು (26) ಎಂದು ಗುರುತಿಸಲಾಗಿದೆ
ರಾಷ್ಟ್ರೀಯ ಹೆದ್ದಾರಿ 66 ರ ಬಪ್ಪನಾಡು ಚೆಕ್ ಪಾಯಿಂಟಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವಾಗ
ಆರೋಪಿಗಳು ಹಾವೇರಿಯಿಂದ ಕೇರಳದ ಕಡೆಗೆ ಈಚರ್ ವಾಹನದಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ವ್ಯವಸ್ಥಿತ ರೀತಿಯಲ್ಲಿ ಸುಮಾರು ಹದಿನಾರು ಜಾನುವಾರುಗಳನ್ನು ( 13 ಕೋಣ, 1ಎಮ್ಮೆ,1 ಹಸು,1 ಹೋರಿ ) ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಈಚರ್ ವಾಹನವನ್ನು ಮುಟ್ಟುಗೋಲು ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.