ಚಿತ್ರಾಪು ಸಾರ್ವಜನಿಕ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಆಗ್ರಹ
ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಚಿತ್ರಾಪು ಗ್ರಾಮದ ಶ್ರೀ ಮೂಕಾಂಬಿಕಾ ಮಂದಿರದಿಂದ ಚಿತ್ರಾಪು ಶಾಲೆ ಸಂಪರ್ಕ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ
ಸುಮಾರು 13 ಕುಟುಂಬಗಳ ಮನೆಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದು ವ್ಯಕ್ತಿಯೊಬ್ಬರ ಒತ್ತುವರಿಂದಾಗಿ ಇಡೀ ಕುಟುಂಬಗಳು ಸಂಕಷ್ಟಕ್ಕೀಡಾಗಿದೆ
ಇದರಿಂದಾಗಿ ಈ ಭಾಗದ ಶಾಲಾ ಮಕ್ಕಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದ್ದು ಸುತ್ತು ಬಳಸಿ ಸಂಚಾರ ಮಾಡಬೇಕಾದ ಪರಿಸ್ಥಿತಿ ಬಂದಿದೆ
ಸಂಪರ್ಕ ರಸ್ತೆಯನ್ನು ಸರ್ವೆ ನಂಬರ್ 35/*/3 ರಲ್ಲಿ ಪದ್ಮನಾಭ ಸಾಲ್ಯಾನ್ ಎಂಬವರು ಒತ್ತುವರಿ ಮಾಡಿದ್ದಾರೆ ಎಂದು ಚಿತ್ರಾಪು ಗ್ರಾಮಸ್ಥರಾದ ರಘುನಾಥ್ ಕುಕ್ಯಾನ್,,ದಿನೇಶ್ ಚಿತ್ರಾಪು, ರವೀಂದ್ರ ಪೂಜಾರಿ ಮೋಹಿನಿ, ನಾರಾಯಣ ನಾಗರಾಜ ಶ್ರೀ ಲತಾ, ಧನಲಕ್ಷ್ಮಿ ಪ್ರಶಾಂತ್ ನಂದಿನಿ ವೆಂಕಟೇಶ ಸಹಿತ ಅನೇಕರು ಸಹಿ ಮಾಡಿದ ಮನವಿಯಲ್ಲಿ ಆರೋಪಿಸಿದ್ದು ಈ ಬಗ್ಗೆ ಸ್ಥಳೀಯ ಶಾಸಕರಿಗೆ ಹಾಗೂ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ರವರಿಗೆ ಮನವಿ ಸಲ್ಲಿಸಿದ್ದಾರೆ
ಸಂಪರ್ಕ ರಸ್ತೆ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ಗಮನಾರ್ಹ ತೊಂದರೆಗಳು ಉಂಟುಮಾಡುತ್ತಿದೆ ವಿಶೇಷವಾಗಿ ಈ ಭಾಗದಲ್ಲಿ ಹಿರಿಯರು ಅನಾರೋಗ್ಯಕ್ಕೀಡಾದರೆ ಅಥವಾ ಅವಘಡ ಸಂಭವಿಸಿದರೆ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ದಳ ಸಂಚರಿಸಲು ಅಸಾಧ್ಯವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ,
ಒತ್ತುವರಿ ತೆರವುಗೊಳಿಸಿದರೆ ಈ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ
ಸುಸಜ್ಜಿತ ರಸ್ತೆ ಸಂಪರ್ಕ ಇಲ್ಲದಿದ್ದರೆ ಈ ಭಾಗದ ಜನತೆಗೆ ಮತ್ತೊಂದು ಸಂಕಷ್ಟ ಎದುರಾಗುತ್ತಿದ್ದು ಭೂ ಪರಿವರ್ತನೆ ಸಾಧ್ಯವಿಲ್ಲ ಹಾಗೂ ಜಾಗ ಮಾರಾಟಕ್ಕೂ ಅನಾನುಕೂಲವಾಗಲಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ
ವ್ಯಕ್ತಿಯೊಬ್ಬರ ಸ್ವಂತ ಹಿತಾಸಕ್ತಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಾರ್ವಜನಿಕರ ರಸ್ತೆ ತಡೆಯನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ
ಮುಲ್ಕಿ ಪೊಲೀಸರಿಂದ ದಬ್ಬಾಳಿಕೆ ಆಕ್ರೋಶ........
ರಸ್ತೆ ಒತ್ತುವರಿ ಬಗ್ಗೆ ಮುಲ್ಕಿ ಪೊಲೀಸರಿಗೆ ಸಾಕ್ಷಿ ಸಮೇತ ದೂರು ನೀಡಿದರೆ ಪೊಲೀಸರು ಪಕ್ಷಪಾತ ನೀತಿ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ಒತ್ತುವರಿ ಮಾಡಿದವರಿಗೆ ಬೆಂಬಲ ಸೂಚಿಸಿ ರಸ್ತೆ ತೆರವುಗೊಳಿಸಲು ಹೋರಾಟ ನಡೆಸುತ್ತಿರುವ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಹಾಗೂ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದು ಮಂಗಳೂರು ಪೊಲೀಸ್ ಕಮಿಷನರ್ ಮಧ್ಯಪ್ರವೇಶಿಸಿ ಮುಲ್ಕಿ ಪೊಲೀಸರ ದಬ್ಬಾಳಿಕೆ ನೀತಿ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ