Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಎಸ್ಕೋಡಿ ಬಳಿ ಮಳೆಗಾಲದಲ್ಲಿ ಅವೈಜ್ಞಾನಿಕ ಗ್ಯಾಸ್ ಪೈಪ್ ಲೈನ್ ಕಾಮಗಾರಿ-ಸಂಚಾರ ಅಸ್ತವ್ಯಸ್ತ


ಮುಲ್ಕಿ:ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿ ಕಳೆದ ಕೆಲ ತಿಂಗಳಿನಿಂದ ನಡೆದ ಅಮೃತ್ 2.0 ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದ ಚಿಪ್ಪರ್ ಚೂರಾಗಿದ್ದು ಇದೀಗ ಮಳೆಗಾಲದಲ್ಲಿ  ಗೈಲ್ ಗ್ಯಾಸ್ ಪೈಪ್ ಲೈನ್ ಕಂಪನಿಯವರು  ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಎಸ್ಕೋಡಿ ಬಳಿ ಅವೈಜ್ಞಾನಿಕವಾಗಿ ಅಗೆತ ಮಾಡುತ್ತಿದ್ದಾರೆ 
ಈ ಭಾಗದಲ್ಲಿ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೊಂಡಮಯವಾಗಿದ್ದು ಇದೀಗ ಮತ್ತೆ ಚರಂಡಿಯಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ 
ಮಳೆಗಾಲದಲ್ಲಿ ರಸ್ತೆ ಅಗೆತ ಸಹಿತ  ಯಾವುದೇ ಕಾಮಗಾರಿ ನಡೆಸಬಾರದು ಎಂಬ ಜಿಲ್ಲಾಧಿಕಾರಿಗಳ ಸೂಚನೆಯನ್ನು ಲೆಕ್ಕಿಸದೆ ಕಾಮಗಾರಿ ನಡಿಯುತ್ತಿದೆ
ಸೋಮವಾರ ಎಸ್ಕೋಡಿಯ ಶೀನಪ್ಪಯ್ಯ ಕೆರೆ ಸಮೀಪ ಹೆದ್ದಾರಿ ಬದಿಯಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. 
ಕಿನ್ನಿಗೋಳಿ ಮುಲ್ಕಿ ಹೆದ್ದಾರಿಯಲ್ಲಿ ಉಂಟಾಗಿರುವ ಅಪಾಯಕಾರಿ ಹೊಂಡಗಳಿಂದ ಅನೇಕ ಅಪಘಾತಗಳು ಸಂಭವಿಸಿದ್ದು  ಕೂಡಲೇ ಇಲಾಖೆ ಎಚ್ಚೆತ್ತು ಮಳೆಗಾಲದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಬೇಕು ಹಾಗೂ ತಾತ್ಕಾಲಿಕ ನೆಲೆಯಲ್ಲಿ ಹೆದ್ದಾರಿ ಹೊಂಡಗಳನ್ನು ಮುಚ್ಚಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಒತ್ತಾಯಿಸಿದ್ದಾರೆ