Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಿಮಂತೂರು:: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ-ಉದಯ ಕುಮಾರ್ ಶೆಟ್ಟಿ

ಮುಲ್ಕಿ: ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು ಉಳಿಸಿ ಪ್ರೋತ್ಸಾಹ ನೀಡಬೇಕಾದ ಅಗತ್ಯತೆ ಇದೆ ಎಂದು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ ಹೇಳಿದರು 
ಅವರು ದೇವಸ್ಥಾನದ ಹೊರಾಂಗಣದಲ್ಲಿ ಶಿಮಂತೂರು ಯುವಕ ಮಂಡಲದ ವತಿಯಿಂದ ನಡೆದ ಗ್ರಾಮೀಣ ಕ್ರೀಡಾಕೂಟದ ಬಹುಮಾನ ವಿತರಣೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು 
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಕ ತಜ್ಞ ಸೀತಾರಾಮ್ ಭಟ್, ನಿವೃತ್ತ ಶಿಕ್ಷಕ ಶಂಕರ್ ಮಾಸ್ಟರ್, ಊರಿನ ಹಿರಿಯರಾದ ಸರೋಜಿನಿ ಶೆಟ್ಟಿ ತೋಕೂರು ರಾಮಕೃಷ್ಣ ಪೂಂಜಾ ಐಟಿಐ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ವಿಶ್ವನಾಥ ರಾವ್,ಯುವಕ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು 
ಗೋಪಾಲ್ ಶಿಮಂತೂರು ಸ್ವಾಗತಿಸಿ ನಿರೂಪಿಸಿದರು ಪ್ರವೀಣ್  ಧನ್ಯವಾದ ಅರ್ಪಿಸಿದರು ಬಳಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು(ಚಿತ್ರ ಇದೆ)
------------------------------------
ಮುಲ್ಕಿ: ಸೆ. 18ರಂದು ಸಾಹಿತಿಗಳಿಗೆ ಸನ್ಮಾನ ಮತ್ತು ಚುಟುಕು ಕವಿ ಗೋಷ್ಠಿ ಕಾರ್ಯಕ್ರಮ
ಮುಲ್ಕಿ:ಚುಟುಕು ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಮತ್ತು ಮುಲ್ಕಿ ಕನ್ನಡ ಸಾಹಿತ್ಯ ಪರಿಷತ್ತು, ಹೋಬಳಿ ಜಂಟಿ ಆಶ್ರಯದಲ್ಲಿ ಸಾಹಿತಿಗಳಿಗೆ ಸನ್ಮಾನ ಮತ್ತು ಚುಟುಕು ಕವಿ ಗೋಷ್ಠಿ ಕಾರ್ಯಕ್ರಮ
ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 18ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ
ಕಾರ್ಯಕ್ರಮವನ್ನು  ಮುಲ್ಕಿ 
 ಮುಲ್ಕಿ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ ವಾಸುದೇವ ಬೆಳ್ಳೆ ಉದ್ಘಾಟಿಸಲಿದ್ದಾರೆ
ಅಧ್ಯಕ್ಷತೆಯನ್ನು ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
 ಉದಯಕುಮಾರ ಹಬ್ಬು ವಹಿಸಲಿದ್ದಾರೆ
ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮೀ ಜೆ. ನಾಯಕ್ ಉಪಸ್ಥಿತರಿವರು
ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳು, ಕಾದಂಬರಿಕಾರರು ಮತ್ತು ನಾಟಕ ಕರ್ತರಾದ
ಶಕುಂತಲಾ ಭಟ್,ಖ್ಯಾತ ಸಾಹಿತಿ ಡಾ ಜನಾರ್ದನ ಭಟ್,ಖ್ಯಾತ ಕವಿ
 ರವೀಂದ್ರ ನಾಯಕ ಸಣ್ಣಕ್ಕಿಬೆಟ್ಟು ರವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಗುವುದು ಹಾಗೂ ಸನ್ಮಾನಿತರಿಂದ ಪುಸ್ತಕ ಬಿಡುಗಡೆ ಬಗ್ಗೆ ಪರಿಚಯ, ಚುಟುಕು ರಚನೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ
ಬಳಿಕ ನಡೆಯುವ ಕವಿಗೋಷ್ಠಿ  ಅಧ್ಯಕ್ಷತೆಯನ್ನು  ಜೋಸ್ಸಿ ಪಿಂಟೋ ವಹಿಸಲಿದ್ದಾರೆ
ಕವಿಗೋಷ್ಠಿಗೆ ಚಾಲನೆಯನ್ನು
 ಅನುರಾಧ ರಾಜೀವ್ ಸುರತ್ಕಲ್ ನೀಡಲಿದ್ದಾರೆ
ಕವಿಗಳಾದ ಪ್ರೇಮಾ ಆರ್ ಶೆಟ್ಟಿ, ಶ್ರೀದೇವಿ, ಪುಷ್ಪರಾಜ ಚೌಟ, ಶಂಕರ ಪಡಂಗ
 ರಾಧಿಕಾ ಕಾಮತ್
 ಉದಯ ಕುಮಾರ್ ಹಬ್ಬು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ