ಮುಲ್ಕಿ: ಬಪ್ಪನಾಡು ದೇವಸ್ಥಾನದಲ್ಲಿ ವಿಜೃಂಭಣೆಯ ಕದಿರು ಕಟ್ಟುವ ಕಾರ್ಯಕ್ರಮ
ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಬಳಿಕ ಗದ್ದೆಗೆ ತೆರಳಿ ಭತ್ತದ ತೆನೆಗೆ ವಿಶೇಷ ಪೂಜೆ ಸಲ್ಲಿಸಿ ತೆನೆಯನ್ನು ಪಲ್ಲಕ್ಕಿ ಮೂಲಕ ವಿವಿಧ ಬಿರುದಾವಳಿಗಳೊಂದಿಗೆ ದೇವಸ್ಥಾನಕ್ಕೆ ತಂದು ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ತೆನೆಯನ್ನು ವಿತರಿಸಲಾಯಿತು
ಈ ಸಂದರ್ಭ ಭಕ್ತರಿಂದ ಶ್ರೀ ದೇವರಿಗೆ ಹಣ್ಣು ಕಾಯಿ ಸೇವೆ ನಡೆಯಿತು
ಈ ಸಂದರ್ಭ ಅರ್ಚಕ ನರಸಿಂಹ ಭಟ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ,ಪ್ರಸಾದ್ ಭಟ್ ಗೋಪಾಲಕೃಷ್ಣ ಭಟ್,ಶ್ರೀನಾಥ್ ಭಟ್, ಗುರುವಪ್ಪ ಕೋಟ್ಯಾನ್, ಸುನಿಲ್ ಆಳ್ವ,
ಸುಜಿತ್ ಸಾಲ್ಯಾನ್ , ಸಂಜೀವ ದೇವಾಡಿಗ,
ಶಶೀoದ್ರ ಸಾಲ್ಯಾನ್, ಚಂದ್ರಶೇಖರ ಸುವರ್ಣ,ನಾಗೇಶ್ ಬಪ್ಪನಾಡು, ಸತೀಶ್ ಶೆಟ್ಟಿ ಪೇಟೆ ಮನೆ, ಕಿಶೋರ್ ಸಾಲ್ಯಾನ್ ಬಿರುವೆರ್ ಕುಡ್ಲ, ರಮೇಶ ಅಮೀನ್ ಕೊಕ್ಕರಕಲ್,
ಪುರುಷೋತ್ತಮ ಬಡಗುಹಿತ್ಲು, ಕೃಷ್ಣರಾಜ್ ಬಪ್ಪನಾಡು, ಹರೀಶ್ ಮಹಂತರ ಮಠ,ತಾರಾನಾಥ ಸುವರ್ಣ ಅಡ್ವೆ ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.