Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಾಳೆ ಮೂಲ್ಕಿ ತಾಲೂಕು ಸೌಧದಲ್ಲಿ ಪ್ರಜಾ ಸೇವೆ ಆಂದೋಲನ ಸಭೆ

ಮೂಲ್ಕಿ:ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ  ನಾಳೆ(ಸೆ.26) ಮೂಲ್ಕಿ ತಾಲೂಕು ಕಚೇರಿಯ  ಸಭಾಭವನದಲ್ಲಿ ಪ್ರಜಾ ಸೇವೆ  ಆಂದೋಲನ  ಸಭೆ  ಬೆಳಿಗ್ಗೆ 11 ಕ್ಕೆ ನಡೆಯಲಿದೆ ಎಂದು ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೂಲ್ಕಿಯ ತಾಲೂಕು ಸೌಧದಲ್ಲಿ ನಡೆಯುವ ಈ ಸಭೆಯಲ್ಲಿ ಸಾರ್ವಜನಿಕರು  ಎದುರಿಸುತ್ತಿರುವ ಪಿಂಚಣಿ ಸಮಸ್ಯೆ, ಪಹಣಿಗಳಲ್ಲಿನ ಸಮಸ್ಯೆ, ವಸತಿ/ನಿವೇಶನ ಸಮಸ್ಯೆ, ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಎದುರಿಸುತ್ತಿರುವ ಸಮಸ್ಯೆ ಮತ್ತು ಇನ್ನಿತರ ಸರಕಾರಿ ಸೇವೆಗಳ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳ ಬಹುದು 
 ಎಂದು ಪ್ರಕಟಣೆ ತಿಳಿಸಿದೆ.