ಮುಲ್ಕಿ: ಕೆಂಪುಗುಡ್ಡೆ ಬಳಿ ಚಿರತೆ ಪ್ರತ್ಯಕ್ಷ-ಸ್ಥಳೀಯರಲ್ಲಿ ಆತಂಕ
ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆ ಯಿಂದ ಮೈಲೊಟ್ಟು ಹೋಗುವ ಪ್ರಧಾನ ರಸ್ತೆಯ ಚಡಾವು ಬಳಿಯ ಬೈಕ್ ಗ್ಯಾರೇಜ್ ಮಾಲಕ ಮಾಧವ ಪೂಜಾರಿ ಎಂಬವರ ಮನೆಯ ಎದುರು ಭಾಗದಲ್ಲಿ ಶುಕ್ರವಾರ ಮಧ್ಯರಾತ್ರಿ ಚಿರತೆ ಪತ್ತೆಯಾಗಿದೆ
ಮಧ್ಯರಾತ್ರಿ 12.೦5 ರಸುಮಾರಿಗೆ ಚಿರತೆ ಮಾಧವ ಪೂಜಾರಿ ರವರ ಗೇಟ್ ಬಳಿ ಬಂದು ವಾಪಸ್ ಹೋಗುವ ದೃಶ್ಯ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಈ ಪರಿಸರದ ಜನ ಭಯಬಿತರಾಗಿದ್ದಾರೆ.
ಕಳೆದ ದಿನದ ಹಿಂದೆ ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಲ್ಲಿಗುಡ್ಡೆ ಸದರ್ನ್ ಎಸ್ಟೇಟ್ ಬಳಿ ಚಿರತೆಯನ್ನು ನಾಯಿಯ ಮೇಲೆ ದಾಳಿ ಮಾಡಿದ ಘಟನೆ ಕೂಡ ನಡೆದಿದ್ದು .ತಾಲೂಕು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸಬೇಕು ಎಂದು ಮಾದವ ಪೂಜಾರಿ ಆಗ್ರಹಿಸಿದ್ದಾರೆ