ಮುಲ್ಕಿ:ದಸಂಸ ಅಂಬೇಡ್ಕರ್ ವಾದ ಮುಲ್ಕಿ ತಾಲೂಕು ಶಾಖೆ ಉದ್ಘಾಟನೆ
ಮುಲ್ಕಿ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮುಲ್ಕಿ ತಾಲೂಕು ಶಾಖೆಯನ್ನು ಶ್ರೀ ಕೋರಬ್ಬು ದೈವಸ್ಥಾನದ ಅರ್ಚಕ ಸುಧಾಕರ ಗೇರುಕಟ್ಟೆ ಉದ್ಘಾಟಿಸಿ ಶುಭ ಹಾರೈಸಿದರು.
ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ.ವಸಂತ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೋಷಿತ ಸಮುದಾಯಕ್ಕೆ ಅನ್ಯಾಯ, ದೌರ್ಜನ್ಯ ಆದಾಗ ಸಂಘಟನೆಯು ಕಾನೂನಾತ್ಮಕವಾಗಿ ಹೋರಾಟ ಮಾಡಿ ನ್ಯಾಯ ಒದಗಿಸಲು ಸಂಘಟನೆಯ ಅಗತ್ಯವಿದೆ. ದಲಿತ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಧಕರಾಗಬೇಕಾದರೆ ಅಂಬೇಡ್ಕರ್ ತೋರಿದ ಸ್ಪಷ್ಟ ಹಾದಿಯಲ್ಲಿ ಸಾಗಬೇಕು ಎಂದರು
ಮುಖ್ಯ ಅತಿಥಿಗಳಾಗಿ ಮಾಜೀ ಸೈನಿಕ ಸುಧಾಕರ ಗುತ್ತಕಾಡು, ದಲಿತ ಮುಖಂಡರಾದ ಸಂಜೀವ ಅಂಚನ್, ಲೋಕೇಶ್ ಬಿ., ಶಂಕರ್ ಅಮೃತಾನಂದಮಯಿ ನಗರ, ಭಾಸ್ಕರ್ ಮಾಬೆನ್, ಪುರಂದರ ಕೆರೆಕಾಡು, ಸಚ್ಚಿದಾನಂದ ಗೇರುಕಟ್ಟೆ ಭಾಗವಹಿಸಿ ಮತನಾಡಿದರು.
ಕುಮಾರ್ ಎಸ್.ಅಂಗರಗುಡ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ನೂತನ ದಸಂಸ ಅಂಬೇಡ್ಕರ್ ವಾದ ಮುಲ್ಕಿ ತಾಲೂಕು ಶಾಖೆ ಸಮಿತಿಯ ಪದಾಧಿಕಾರಿಗಳು: ಸಂಚಾಲಕ ಪುರಂದರ ಕೆರೆಕಾಡು, ಸಂಘಟನಾ ಸಂಚಾಲಕರು ಸಂಜೀವ ಅಂಚನ್, ಜಯ ಅಮೃತಾನಂದಮಯಿ ನಗರ, ಶ್ರೀಕುಮಾರ್ ಎಸ್.ಅಂಗರಗುಡ್ಡೆ, ಸಚ್ಚಿದಾನಂದ ಗೇರುಕಟ್ಟಿ, ಶಂಕರ್ ಕೆಎಸ್‌ರಾವ್ ನಗರ, ಭಾಸ್ಕರ ಮಾಬೆನ್ ಕಾರ್ನಾಡು, ನಿರ್ವಹಣಾ ಸಮಿತಿ ಸದಸ್ಯರು-ಜಗ ನ್ನಾಥ್ ಗೇರುಕಟ್ಟೆ, ಸುಧಾಕರ ಗುತ್ತಕಾಡು, ಮೋಹನ್ ಚಿತ್ರಾಪು, ವಿಜಯ ಕಾರ್ನಾಡು, ಸುಧಾಕರ ಗೇರುಕಟ್ಟೆ, ರಕ್ಷಣ್ ಕಾರ್ನಾಡು, ಶಯನ್ ಕೆಎಸ್‌ರಾವ್ ನಗರ, ತಾಲೂಕು ಸಮಿತಿ ಸದಸ್ಯರು-ಸತೀಶ್ ಅಮೃತಾನಂದಮಯಿ ನಗರ, ಗೋಪಾಲ ಅಮೃತಾನಂದಮಯಿ ನಗರ, ರಮೇಶ್ ಕಾರ್ನಾಡು, ಪ್ರಕಾಶ್ ಪೊಯ್ಯಾರು, ವಿಠಲ ಸಾಲ್ಯಾನ್ ಮುಲ್ಕಿ ರಮೇಶ್ ಜೆ.ಬಿ., ಸಂಜನಾ, ರೇಣುಕಾ ಪ್ರವೀಣ್ ಗೇರುಕಟ್ಟೆ, ಕೃಷ್ಣ ಅಮೃತನಂದಮಯಿ ನಗರ.
(ಚಿತ್ರ ಇದೆ-ದಸಂಸ ಅಂಬೇಡ್ಕರ್ ವಾದ ಮೂಲ್ಕಿ ತಾಲೂಕು ಶಾಖೆ ಉದ್ಘಾಟನೆ ನಡೆಯಿತು.)