ಬಪ್ಪನಾಡು: ಹೊಸ ಅಂಗಣ ದಶಮಾನೋತ್ಸವ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ
ಮುಲ್ಕಿ: ಹೊಸ ಅಂಗಣದ ದಶಮಾನೋತ್ಸವ ಸಂಭ್ರಮ ಅಕ್ಟೋಬರ್ 4 ಭಾನುವಾರ ಬಪ್ಪನಾಡು ಶ್ರೀ ಅನ್ನಪೂರ್ಣೇಶ್ವರಿ ಸಭಾಗೃಹ ದಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ರವರ
ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮೂಲಕ ನಡೆಯಿತು
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಮಾತನಾಡಿ ಹೊಸ ಅಂಗಣದ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು
ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಪ್ರಸಾದ್ ಭಟ್ ಬಪ್ಪನಾಡು, ವಾಸು ಪೂಜಾರಿ ಚಿತ್ರಾಪು,ಉದ್ಯಮಿ ಜಾನ್ ಕ್ವಾಡ್ರಾಸ್, ರಮೇಶ್ ಅಮೀನ್ ಕೊಕ್ಕರಕಲ್,ಸುರೇಂದ್ರ ಜಿ ಶೆಣೈ,ಮಹೀಮ್ ಹೆಗ್ಡೆ, ಸರೋಜಿನಿ ಸುವರ್ಣ, ಕರುಣಾಕರ ಪೂಜಾರಿ, ಉದಯಕುಮಾರ್ ಶೆಟ್ಟಿ ಅಧಿಧನ್, ಲತಾ ಶೇಖರ್ ಕೊಳಚಿ ಕಂಬಳ, ವಾಸು ಪೂಜಾರಿ ಕೊಲಕಾಡಿ, ಜಯಪಾಲ ಶೆಟ್ಟಿ ಐಕಳ, ಜೇಸಿ ದಿನೇಶ್ ಶೆಟ್ಟಿ , ರವಿಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು
ಹೊಸ ಅಂಗಣದ ಡಾ. ಹರೀಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿ ನಿರೂಪಿಸಿದರು