Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: 300 ವರ್ಷಗಳಿಂದ ಅಪರೂಪದ ಕಾಷ್ಠ ನಿರ್ಮಿತ ಗಣಪತಿಗೆ ಚೌತಿಯ ವಿಶೇಷ ಪೂಜೆ

ಮುಲ್ಕಿ: ಸುಮಾರು 300 ಇತಿಹಾಸದ  ಹಿಂದಿನ ತಲೆಮಾರಿನಿಂದ ಮುಲ್ಕಿ ಪಂಚಮಹಲ್ ಬಳಿಯ ಶ್ರೀ ಮಹಾಗಣಪತಿ ಮೂಲಸ್ಥಾನದಲ್ಲಿ ಭಾಗವತ್‌ ಕುಟುಂಬಸ್ಥರು ಪೂಜಿಸಿಕೊಂಡು ಬರುತ್ತಿರುವ  ಅಪರೂಪದ ಕಾಷ್ಠ ನಿರ್ಮಿತ ಗಣಪತಿಗೆ ಚೌತಿಯ ವಿಶೇಷ ಪೂಜೆ ನಡೆಯುತ್ತಿದೆ.
ಸುಮಾರು ಏಳರಿಂದ ಎಂಟು ತಲೆಮಾರು ಹಿಂದೆ ಭಾಗವತ ಕುಟುಂಬಸ್ಥರು ಮುಲ್ಕಿ ಯಕ್ಷಗಾನ ಮೇಳವನ್ನು ಪ್ರಾರಂಭಿಸಿ, ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಒಪ್ಪಿಸಿದ ಬಳಿಕ ಶ್ರೀ ದೇವರ ನುಡಿಯಲ್ಲಿ ಬಂದ ಹಾಗೆ ಕಾಷ್ಠ ನಿರ್ಮಿತ ಗಣಪತಿಯನ್ನು ಭಾಗವತ ಕುಟುಂಬದ ಮೂಲ ಮನೆಯಲ್ಲಿ ಇರಿಸಿ ನಾಲ್ಕು ತಲೆಮಾರುಗಳ ಹಿಂದಿನಿಂದ ವರ್ಷಕ್ಕೊಮ್ಮೆ ಗಣೇಶ ಚತುರ್ಥಿಯ ದಿನದಂದು ವಿಶೇಷ ಪೂಜೆ ನಡೆಯುತ್ತಿದೆ.
ಗಣೇಶ ಚತುರ್ಥಿಯ ದಿನದಂದು ಕಾಷ್ಠ ನಿರ್ಮಿತ ಗಣಪತಿಗೆ ಕುಟುಂಬಸ್ಥರಿಂದ ಹಾಗೂ ಸ್ಥಳೀಯ ಗ್ರಾಮಸ್ಥರಿಂದ ವಿಶೇಷ ಅಪ್ಪ ಸೇವೆ, ಮಧ್ಯಾಹ್ನ ಮಹಾ
ಅನ್ನ ಸಂತರ್ಪಣೆ ನಡೆಯುತ್ತದೆ.
ರಾತ್ರಿ ರಂಗ ಪೂಜೆ ಬಳಿಕ ಗಣಪತಿ ವಿಸರ್ಜನೆ ಮಾಡದೆ ಪೆಟ್ಟಿಗೆಯೊಳಗೆ ತೆಗೆದಿರಿಸಲಾಗುತ್ತದೆ.
ನಿಂತು ಕೊಂಡಿರುವ ಸುಂದರವಾಗಿ ಕಾಣುತ್ತಿರುವ ಅಪರೂಪದ ಮರದ ಗಣಪತಿ ಆರಾಧಿಸಲು ಹಿಂದಿನ ತಲೆಮಾರಿನವರು ದೂರದ ಮುಂಬೈ, ಬೆಳಗಾಂ, ಹುಬ್ಬಳ್ಳಿ ಮತ್ತಿತರ ಕಡೆಗಳಿಂದ ಕುಟುಂಬಸ್ಥರು ನೆಂಟರಿಷ್ಟರು ಹುಡುಕಿಕೊಂಡು ಬರುತ್ತಿದ್ದು, ವರ್ಷ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಭಾಗವತ ಕುಟುಂಬಸ್ಥರ ನರಸಿಂಹ ಭಾಗವತ್ ಈ ಸಂದರ್ಭದಲ್ಲಿ ಅಭಿಮಾನ ಹಾಗೂ ಭಕ್ತಿಯಿಂದ ಪಬ್ಲಿಕ್ ನೆಕ್ಸ್ ಜೊತೆ ಹೇಳುತ್ತಾರೆ