Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಬಪ್ಪನಾಡು ದೇವಳ ಅಭಿವೃದ್ಧಿಗೆ 30 ಕೋಟಿ ನೀಲನಕಾಶೆ ಸಿದ್ಧ-ಯದು ನಾರಾಯಣಶೆಟ್ಟಿ ;ಸೀಮೆಯ ಒಂಬತ್ತು ಮಾಗಣೆಯ ಭಕ್ತರ ಸಭೆ

ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ  ಸೀಮೆಯ  ಒಂಬತ್ತು ಮಾಗಣೆಯ ಭಕ್ತರ ಸಭೆ ಜ್ಞಾನ ಮಂದಿರದಲ್ಲಿ  ಆದಿತ್ಯವಾರ 
ನಡೆಯಿತು
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದೇವಸ್ಥಾನದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಮತ್ತಿತರರು ಉಪಸ್ಥಿತರಿದ್ದರು 
ಸಭೆಯ ಅಧ್ಯಕ್ಷತೆ ವಹಿಸಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಮಾತನಾಡಿ ದೇವಸ್ಥಾನದ ಜೀರ್ಣೋದ್ಧಾರ ನಡೆಸಲು
 ನೂತನವಾಗಿ 17ಮಂದಿ ಸದಸ್ಯರ ಅಭಿವೃದ್ಧಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು
ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಯದು ನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದರು
ಸಮಿತಿಯಲ್ಲಿ ದೇವಸ್ಥಾನದ ವತಿಯಿಂದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ 
 ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಆಳ್ವ ಕಾರ್ಯಾಧ್ಯಕ್ಷರಾಗಿ ,ಅತುಲ್ ಕುಡ್ವ, ಸದಸ್ಯರಾಗಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಸಂತೋಷ್ ಕುಮಾರ್ ಹೆಗ್ಡೆ, ಚಂದ್ರಶೇಖರ ಜಿ ಕಾಸಪ್ಪಯ್ಯನವರ ಮನೆ, ರಾಮಚಂದ್ರ ನಾಯ್ಕ್ ಕೋಲ್ನಾಡು ಗುತ್ತು, ಸುಜಿತ್ ಸಾಲ್ಯಾನ್, ಚಂದ್ರಶೇಖರ ಸುವರ್ಣ, ಉದಯಕುಮಾರ್ ಶೆಟ್ಟಿ ಅಧಿಧನ್, ಪುರಂದರ ಶೆಟ್ಟಿಗಾರ್,ಸೂರ್ಯ ಕುಮಾರ್ ಹಳೆಯಂಗಡಿ, ಕರುಣಾಕರ ಶೆಟ್ಟಿ ಕಿಲ್ಪಾಡಿ, ಭಾಸ್ಕರ್ ಸಾಲ್ಯಾನ್ ಹಳೆಯಂಗಡಿ, ಸಂಜೀವ ದೇವಾಡಿಗ ಆಯ್ಕೆಯಾಗಿದ್ದಾರೆ ಎಂದರು
ಅವರು ಮಾತನಾಡಿ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಒಗ್ಗಟ್ಟಾಗಿ ಒಂಬತ್ತು ಮಾಗಣೆಯ ಭಕ್ತರು ಮುಂದುವರಿಯಬೇಕಾಗಿದೆ ಎಂದರು
ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷ ಯದುನಾರಾಯಣಶೆಟ್ಟಿ ಮಾತನಾಡಿ ಸುಮಾರು 30 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿಯ ನೀಲನಕಾಶೆ ಸಿದ್ಧವಾಗಿದ್ದು   ದೇವಸ್ಥಾನಕ್ಕೆ ನೂತನ ಬ್ರಹ್ಮ ರಥ ಹಾಗೂ  ಕ್ಷೇತ್ರ ಪಾಲ ಗುಡಿ ನಿರ್ಮಾಣ ಮೊದಲ ಆದ್ಯತೆಯಾಗಿದೆ ಬಳಿಕ ರಥ ಬೀದಿ ನಿರ್ಮಾಣ ಸಹಿತ ನೂತನ ಅನ್ನಚಕ್ರ ನಿರ್ಮಾಣ ಯೋಜನೆಗಳು ದಾನಿಗಳು ಹಾಗೂ ಭಕ್ತರ ಸಹಕಾರದಿಂದ ನಿರ್ಮಾಣಗೊಳ್ಳಲಿದೆ ಎಂದರು 
 ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವ ಪ್ರಸ್ತಾವಿಕವಾಗಿ ಮಾತನಾಡಿ ದೇವಸ್ಥಾನಕ್ಕೆ ನೂತನ ಕ್ಷೇತ್ರ ಪಾಲ ಗುಡಿ ಮುಂದಿನ ಜನವರಿ 15ರ ಬಳಿಕ ಪ್ರತಿಷ್ಠೆ ನಡೆಯಲಿದೆ, ನೂತನ ಬ್ರಹ್ಮ ರಥದ ಬಗ್ಗೆ ಈಗಾಗಲೇ ನೀಲ ನಕಾಶೆ ಸಿದ್ಧವಾಗಿದ್ದು ಮುಲ್ಕಿ ನಾಲ್ಕು ಪಟ್ನ ಮೊಗವೀರ ಸಭಾ ಹಾಗೂ ಸ್ಥಳೀಯರ ಜೊತೆ ಚರ್ಚಿಸಿ  ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು ಅವರು ಮಾತನಾಡಿ ಬಪ್ಪನಾಡು ದೇವಸ್ಥಾನದ ರಥಬೀದಿ ಅಭಿವೃದ್ಧಿಪಡಿಸುವ ಚಿಂತನೆ, ಒಳಚರಂಡಿಯ ಯೋಜನೆಗೆ ಮಾಸ್ಟರ್ ಪ್ಲಾನ್ ಸಿದ್ದತೆ, ನೂತನ ಅನ್ನಛತ್ರ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ, ನಡೆಯಲಿದೆ ಎಂದರು 
ಅಭಿವೃದ್ಧಿಗೆ ಪೂರಕವಾಗಿ ದೇವಸ್ಥಾನದಲ್ಲಿ ಸೇವಾ ಕೌಂಟರ್  ಹಾಗೂ ಅಭಿವೃದ್ಧಿ ಸಮಿತಿ ಕಚೇರಿ ಮಾಡುವ ಯೋಜನೆ ಇದೆ ಎಂದರು
ದೇವಸ್ಥಾನದ ಅಭಿವೃದ್ಧಿಯ ಯೋಜನೆಗಳ ಬಗ್ಗೆ ಅಭಿವೃದ್ಧಿ ಸಮಿತಿಯ ಸದಸ್ಯ  ರಾಮಚಂದ್ರ ನಾಯ್ಕ್ ಕೋಲ್ನಾಡ್ ಗುತ್ತು 
ಮುಲ್ಕಿ ನಾಲ್ಕು ಪಟ್ನ ಮೊಗವೀರ ಸಭಾದ ಅಧ್ಯಕ್ಷ ಚಂದ್ರಕಾಂತ ಶ್ರೀಯಾನ್,ಸದಸ್ಯ ಏಕನಾಥ ಕರ್ಕೇರ , ಕಿರಣ್ ಶೆಟ್ಟಿ ಕೋಲ್ನಾಡ್ ಗುತ್ತು,
ವಿನೋದ್ ಸಾಲ್ಯಾನ್ ಬೆಳ್ಳಾಯರು, ದಯಾನಂದ ಮತ್ತಿತರರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು 
ಸುನಿಲ್ ಆಳ್ವ ಸ್ವಾಗತಿಸಿ ನಿರೂಪಿಸಿ ಧನ್ಯವಾದ ಅರ್ಪಿಸಿದರು(ಚಿತ್ರ ಇದೆ -ಸಭೆಯಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಮಾತನಾಡಿದರು)