ಮುಲ್ಕಿ: ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2025-26ನೇ ಸಾಲಿನ ಸಭೆ
ಮುಲ್ಕಿ: ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2025-26ನೇ ಸಾಲಿನ ಸಭೆಯು ಸೋಮವಾರ ಸಂಘದ ಆವರಣದಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಫುಲ್ಲಾ ಸಿ ಶೆಟ್ಟಿ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಸರೋಜಿನಿ ಮಾತನಾಡಿ ಸಂಘದ ಅಭಿವೃದ್ಧಿಗೆ
ನಿರ್ದೇಶಕರ ಹಾಗೂ ಸದಸ್ಯರ ಸಹಭಾಗಿತ್ವ ಮುಖ್ಯ , ಹಾಲಿನ ಗುಣಮಟ್ಟ ಕಾಪಾಡುವುದರ ಜೊತೆಗೆ ಸ್ವಚ್ಛತೆ ಶಿಸ್ತು ಬದ್ಧ ಹೈನುಗಾರಿಕೆಯಿಂದ ಹೆಚ್ಚಿನ ಲಾಭವಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ವನಿತಾ ವಿ ಶೆಟ್ಟಿ,ನಿರ್ದೇಶಕರಾದ ಪದ್ಮಿನಿ ವಿಜಯಕುಮಾರ್ ಶೆಟ್ಟಿ, ಶೋಭಾ ವಿ. ಶೆಟ್ಟಿ, ಲೀಲಾ ಎಸ್ ಶೆಟ್ಟಿ, ಬೇಬಿ ಕೆ, ಶೋಭಾ ಎ ಶೆಟ್ಟಿ, ಗುಲಾಬಿ ಕೆ ಪೂಜಾರಿ, ಶಾಂತಾ ವಿ ಶೆಟ್ಟಿ, ಜಯಶ್ರೀ ಡಿ ಶೆಟ್ಟಿ, ಕಾರ್ಯದರ್ಶಿ ಮಮತಾ ಅನಿಲ್ ಶೆಟ್ಟಿ, ಹಾಲು ಪರೀಕ್ಷಕಿರಾದ ಅಶ್ವಿನಿ ಪಾಂಡುರಂಗ ಹಾಗೂ ವಿನಯ್, ಸಹಾಯಕಿ ಆಶಾಸುಂದರ ಮತ್ತಿತರರು ಉಪಸ್ಥಿತರಿದ್ದರು
ಮಮತಾ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು, ಅಶ್ವಿನಿ ಧನ್ಯವಾದ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಟ್ ವಿತರಿಸಲಾಯಿತು, ಹಾಗೂ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ವಿಜಯ ಆರ್ ಶೆಟ್ಟಿ(ಪ್ರ), ಜಯಶ್ರೀ ದಿವಾಕರ ಶೆಟ್ಟಿ ಶೆಟ್ಟಿ(ದ್ವಿ), ಹರಿಣಾಕ್ಷಿ ಸುಂದರ ಪೂಜಾರಿ(ತೃ) ಹಾಗೂ ಹೆಚ್ಚು ಗುಣಮಟ್ಟದ ಹಾಲು ಹಾಕಿದ ನಳಿನಿ ಶಂಕರ ಶೆಟ್ಟಿ ರವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು