Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಮುಲ್ಕಿ ಕ್ಷೀರಸಾಗರ ವಿವಿಧೋದ್ದೇಶ ಸಹಕಾರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ

ಮುಲ್ಕಿ: ಮುಲ್ಕಿ ಕ್ಷೀರಸಾಗರ ವಿವಿಧೋದ್ದೇಶ ಸಹಕಾರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು. 
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ಸಂಘದ ಆಡಳಿತ ಮಂಡಳಿಯ ಹಾಗೂ ಸರ್ವ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ಧಿಯತ್ತ ಸಾಗುತ್ತಿದ್ದು ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶೀಘ್ರದಲ್ಲಿ ಕಾರ್ಯಸೂಚಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು 
ಮುಖ್ಯ ಅತಿಥಿಗಳಾಗಿ ಮುಲ್ಕಿ ಕ್ಷೀರಸಾಗರ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಲಿಡಿಯಾ ಫುರ್ಟಾಡೋ , ನಿರ್ದೇಶಕರಾದ ರಮೇಶ್ ಕೋಟ್ಯಾನ್, ಮೋಹನ ದಾಸ, ಹರೀಂದ್ರ ಸುವರ್ಣ,ಗುರುವ, ವೀರಪ್ಪ ಎಲ್‌ ಆಮೀನ್, ಗಣೇಶ್ ಕುಕ್ಯಾನ್, ಶಶಿಕಲಾ ವೈ ಅಮೀನ್,  ಸದಸ್ಯರಾದ ಅಬ್ದುಲ್ ರಜಾಕ್,ಕಾರ್ಯನಿರ್ವಹಣಾಧಿಕಾರಿ ರಘುರಾಜ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಶೇ.8 ಡಿವಿಡೆಂಡ್ ವಿತರಿಸಲಾಯಿತು
ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿದರು, ನಿರ್ದೇಶಕ
ಹರೀಂದ್ರ ಸುವರ್ಣ
ಧನ್ಯವಾದ ಅರ್ಪಿಸಿದರು ರಘುರಾಜ್ ನಿರೂಪಿಸಿದರು.