Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ

ಮುಲ್ಕಿ: ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ 2025 26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ನಾರಾಯಣ ಸನಿಲ್ ಸಭಾಭವನದಲ್ಲಿ ಶನಿವಾರ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್‌ ಎಸ್‌ ಸತೀಶ್ ಭಟ್ ವಹಿಸಿ ಮಾತನಾಡಿ ಕಳೆದ ವರ್ಷಗಳಲ್ಲಿ ಸಂಘದ ಕಾರ್ಯಕ್ಷೇತ್ರದ ವಿವಿಧ ಶಿಕ್ಷಣ, ಸಂಘ ಸಂಸ್ಥೆಗಳಿಗೆ, ಅಸಹಾಯಕರಿಗೆ ಸಹಾಯ ಹಸ್ತ, ವಿದ್ಯಾರ್ಥಿ ವೇತನ ವಿತರಣೆ, ಕ್ರೀಡೆ, ಸಾಂಸ್ಕೃತಿಕ ಸಭೆ ಸಮಾರಂಭಗಳಿಗೆ ಪ್ರೋತ್ಸಾಹ ಹಾಗೂ ಕೃಷಿಕರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಂಘದ ನೂತನ ಕಟ್ಟಡ ನಿರ್ಮಾಣ ಯೋಜನೆ  ಪ್ರಗತಿಯಲ್ಲಿದೆ, ಗ್ರಾಹಕರ ಅನುಕೂಲಕ್ಕಾಗಿ ಸೊಸೈಟಿಯಲ್ಲಿ ನೆಫ್ಟ್/ಆರ್ ಟಿ ಜಿ ಎಸ್, ಇ ಪೇಮೆಂಟ್ ಸಹಿತ  ಅನೇಕ ಸೇವಾ ಸೌಲಭ್ಯಗಳು ಇದೆ, ಸುಮಾರು 137 ಸ್ವಸಹಾಯ ಗುಂಪುಗಳ ರಚನೆ ಮಾಡಲಾಗಿದೆ, ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಸಂಘದ ಪ್ರಗತಿಗೆ ನಿರ್ದೇಶಕರ ಹಾಗೂ ಸದಸ್ಯರ ಸಹಕಾರ ಅಗತ್ಯ ಎಂದರು
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಮೀರಾ ಬಾಯಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕ‌ರ್, ನಿರ್ದೇಶಕರಾದ ವಿನೋದ್  ಬೊಳ್ಳೂರು, ಎಚ್ ವಸಂತ್
ಬೆರ್ನಾಡ್, ಧರ್ಮಾನಂದ ಶೆಟ್ಟಿಗಾ‌ರ್, ಅಶೋಕ್‌ ಬಂಗೇರ, ಸೇಸಪ್ಪ ಟಿ ಸಾಲ್ಯಾನ್, ಸಂಧ್ಯಾ, ಮುಖೇಶ್ ಸುವರ್ಣ, ಶಿವರಾಮ್, ರೋಶನಬಿ, ಧನಂಜಯ, ನಾಮ ನಿರ್ದೇಶಕ ಸದಸ್ಯರಾದ ಹಿಮಕರ ಆ‌ರ್ ಪುತ್ರನ್, ರಾಜೇಶ್ ಎಸ್ ದಾಸ್, ಮನೋಜ್ ಮತ್ತು ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ನಮಿತಾ ಪ್ರಾರ್ಥಿಸಿದರು ಕಾರ್ಯನಿರ್ವಹಣಾಧಿಕಾರಿ ಹಿಮಕರ್ ಸ್ವಾಗತಿಸಿ ನಿರೂಪಿಸಿದರು ಜೊತೆ ಕಾರ್ಯದರ್ಶಿ ಶ್ರೀಕಾಂತಿ ಶೆಟ್ಟಿ, ಧನ್ಯವಾದ ಅರ್ಪಿಸಿದರು ಸದಸ್ಯರಿಗೆ ಶೇಕಡಾ 19% ಡಿವಿಡೆಂಟ್ ವಿತರಿಸಲಾಯಿತು.