ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ 2025 -26 ನೇ ಸಾಲಿನ 50ನೇ ವಾರ್ಷಿಕ ಸಭೆ- ಸಾಧಕರಿಗೆ ಗೌರವ
ಮುಲ್ಕಿ: ಪ್ರತಿಷ್ಠಿತ ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ 50ನೇ ವಾರ್ಷಿಕ ಮಹಾಸಭೆ ಹಾಗೂ 2025- 26ನೇ ಸಾಲಿನ ಆಡಳಿತ ವರದಿ ಕಾರ್ಯಕ್ರಮ ಭಾನುವಾರ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ನಡೆಯಿತು
ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಪ್ರಸಕ್ತ ಸಾಲಿನಲ್ಲಿ 173 ಕೋಟಿ 86 ಲಕ್ಷ ವ್ಯವಹಾರ ನಡೆಸಿದ್ದು ಸದಸ್ಯರಿಗೆ ಲಾಭಾಂಶದ ಶೇ.10 ಡಿವಿಡೆಂಡ್ ನೀಡಲಾಗಿದೆ ಈಗಾಗಲೇ ಸಂಘದ ನೂತನ ಕಟ್ಟಡ ನಿರ್ಮಾಣ ಆರಂಭವಾಗಿದ್ದು ಶೀಘ್ರ ಕಾಮಗಾರಿ ನಡೆದು ನೂತನ ಕಟ್ಟಡ ಕಾರ್ಯಾರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಅವರು ಮಾತನಾಡಿ ಸೊಸೈಟಿಯು ಶಿಕ್ಷಣದ ಜೊತೆಗೆ, ಶಿಕ್ಷಣೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ 50ನೇ ವರ್ಷದಲ್ಲಿ 50 ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದ್ದು ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ತೃಪ್ತಿ ಇದೆ ಎಂದರು
ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾದ ಶಾಖಾಧಿಕಾರಿ ಸಚಿನ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ನಿರ್ದೇಶಕ ಗಂಗಾಧರ ವಿ. ಶೆಟ್ಟಿ ಅಶೋಕ್ ಕುಮಾರ್ ಚಿತ್ರಾಪು, ನರಸಿಂಹ ಪೂಜಾರಿ, ದೇವಪ್ರಸಾದ್, ಮಮತಾ ಡಿ. ಪೂಂಜ, ಪದ್ಮಿನಿ ವಿ ಶೆಟ್ಟಿ ರಾಜೇಶ್ ಶೆಟ್ಟಿ ಪ್ರಭಾಕರ
ದೇವಾಡಿಗ, ರಾಮ ನಾಯ್ಕ, ನಂಜುಂಡ ಆರ್ ಕೆ., ಮತ್ತಿತರರು ಉಪಸ್ಥಿತರಿದ್ದರು
.ಪ್ರಗತಿಪರ ಹಿರಿಯ ಕೃಷಿಕರಾದ ಶಿವರಾಮ್ ಎ ಸುವರ್ಣ ಅತಿಕಾರಿಬೆಟ್ಟು,ವಿಶ್ವನಾಥ ಶೆಟ್ಟಿ ಉಳೆಪಾಡಿ,ಸದಾನಂದ ಶೆಟ್ಟಿ ಶಿಮಂತೂರು, ಲಾಬಿನ್ ಮೈಕಲ್ ಡಿಸೋಜಾ ಬಳ್ಕುಂಜೆ, ಪಾಂಡುರಂಗ ದೇವಾಡಿಗ ಬಪ್ಪನಾಡು,ವನಜಾ ಕೆ ಕೋಟ್ಯಾನ್ ರವರನ್ನು ಸನ್ಮಾನಿಸಲಾಯಿತು
ಸಂಘದ ವತಿಯಿಂದ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ
ಗೌರವಿಸಲಾಯಿತು ಹಾಗೂ ಕಳೆದ ಸಾಲಿನಲ್ಲಿ ಸಂಘಕ್ಕೆ ಉತ್ತಮ ವ್ಯವಹಾರ ಮಾಡಿದ ಮೋಹನ್ ಜಿ ಕುಂದರ್, ಸುನೀತ ಕೆ ಶೆಟ್ಟಿ, ಫಾತಿಮಾ ಕೆಎಸ್ ರಾವ್ ನಗರ ರವರನ್ನು ಗೌರವಿಸಲಾಯಿತು
ಸದಸ್ಯರ ಸಮಸ್ಯೆಗಳ ಬಗ್ಗೆ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್,ಸಾಧು ಅಂಚನ್ ಮಟ್ಟು ರಮೇಶ್ ಅಜಿಲ ಹಾಗೂ ಹರಿಶ್ಚಂದ್ರ ಶೆಟ್ಟಿ ಕರ್ನೀರೆ ಗುತ್ತು ಮತ್ತಿತರರು ಮಾತನಾಡಿದರು.
ಸಂಘದ ನಿರ್ದೇಶಕ ಗಂಗಾಧರ ಶೆಟ್ಟಿ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ಚಂದ್ರಕಾಂತ ಶೆಟ್ಟಿ ವರದಿ ಮಂಡಿಸಿದರು. ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್ ನಿರೂಪಿಸಿದರು.