Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನ್ಯಾಯಾಲಯಕ್ಕೆ ಹಾಜರಾಗದೆ 12 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮುಲ್ಕಿ : ಕಳೆದ 12 ವರ್ಷಗಳಿಂದ ಹಲವಾರು ಬಾರಿ ದಸ್ತಗಿರಿ ವಾರಂಟ್, ಪ್ರೊಕ್ಲಮೇಷನ್ ಹೊರಡಿಸಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಲಿಂಗಪ್ಪಯ್ಯ ಕಾಡು ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂದನ ವಿಧಿಸಿದೆ
ಆರೋಪಿಯನ್ನು ಮುಲ್ಕಿ ಸಮೀಪದ ಕೆಎಸ್ ರಾವ್ ನಗರ  ಹನುಮಂತ ದೇವಸ್ಥಾನದ ಬಳಿಯ ನಿವಾಸಿ ಸಂತೋಷ (33 ) ಎಂದು ಗುರುತಿಸಲಾಗಿದೆ
ಆರೋಪಿ ಸಂತೋಷ್ ಮುಲ್ಕಿ ಪೊಲೀಸ್ ಠಾಣೆ ಅ. ಕ್ರ 209/2014  ಕಲಂ 448, 354 IPC ಹಾಗೂ ಮೂಡಬಿದ್ರೆಯ ಹಿರಿಯ ಸಿಜೆ & ಜೆ. ಎಂ. ಎಫ್. ಸಿ ನ್ಯಾಯಾಲಯ, ರವರ CC No 274/2023  ಪ್ರಕರಣದಲ್ಲಿ ಸುಮಾರು 12 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ