Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿದ್ಯುತ್ ಅಪಘಾತಕ್ಕೆ ಬಲಿಯಾದ ವಾನರದ ಅಂತ್ಯ ಸಂಸ್ಕಾರ ನಡೆಸಿದ ಕಿನ್ನಿಗೋಳಿ ಪ.ಪಂ ಸದಸ್ಯ

ಕಟೀಲು:ವಿದ್ಯುತ್ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ  ವಾನರವೊಂದರ ಅಂತ್ಯ ಸಂಸ್ಕಾರ ನಡೆಸಿ, 10  ದಿನಗಳ ನಂತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಕಾರ್ಯಕ್ರಮವೊಂದು ಕಿನ್ನಿಗೋಳಿಯಲ್ಲಿ ನಡೆದಿದೆ. ಕಿನ್ನಿಗೋಳಿಯ  ಬಸ್ಸು ನಿಲ್ದಾಣದ  ಸಮೀಪ   ವಾನರವೊಂದು ಮಂಗವೊಂದು  ಅಕಸ್ಮಿಕವಾಗಿ ವಿದ್ಯುತ್ ಅಪಘಾತಕ್ಕೆ ಬಲಿಯಾಗಿತ್ತು. ಇದನ್ನು ಅರಿತ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ಪ್ರಕಾಶ್ ಕಿನ್ನಿಗೋಳಿ  ಬಲಿಯಾದ ವಾನರದ ಅಂತ್ಯ ಸಂಸ್ಕಾರ ನಡೆಸಿ 10 ದಿನಗಳ ನಂತರ ಕೊಡೆತ್ತೂರು ದೇವಸ್ಯ ಮಠದಲ್ಲಿ, ವೇದವ್ಯಾಸ ಉಡುಪರ ಪೌರೋಹತ್ಯದಲ್ಲಿ ರಾಮತಾರಕ ಮಂತ್ರ, ಹೋಮ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕ ಅನ್ನಸಂತರ್ಪಣೆಯನ್ನು ನಡೆಸಿದ್ದಾರೆ.ಈ ಅಪರೂಪದ ಕಾರ್ಯಕ್ರಮ ವೊಂದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.