ದಾಮಸ್ಕಟ್ಟೆ: ರಕ್ತದಾನ ಹಾಗೂ ಕೇಶದಾನ ಶಿಬಿರ
ಕಿನ್ನಿಗೋಳಿ :ಭಾರತೀಯ ಕಥೋಲಿಕ ಯುವ ಸಂಚಲನ,ಕಿರೆಂ ಘಟಕ ಹಾಗೂ ಐ.ಸಿ.ವೈ.ಎಮ್ .ಸಂತ ಜೂದರ, ಮಂಗಳೂರು ಉತ್ತರ ವಲಯ,ಎಂ.ಎಸ್.ಪಿ.ಎಸ್ ಪಿಟ್ನೆಸ್, ಕಿನ್ನಿಗೋಳಿ ,ತಾರಿಪಾಡಿ ಜವನೆರೆ ಕಲ, ರೇಷ್ಮಾ ಮೆಡಿಕಲ್, ಕಿನ್ನಿಗೋಳಿ,ಫಾದರ್ ಮುಲ್ಲಾರ್ಸ್ ಆಸ್ಪತ್ರೆ, ಕಂಕನಾಡಿ,ರೆಡ್ ಡ್ರಾಪ್ ಕಿನ್ನಿಗೋಳಿ ಇವರ ಸಹಯೋಗದೊಂದಿಗೆ ರಕ್ತದಾನ ಹಾಗೂ ಕೇಶದಾನ ಶಿಬಿರ ದಾಮಸ್ಕಟ್ಟೆ ಕಿರೆಂ ಇಗರ್ಜಿಯ ಸಭಾಂಗಣದಲ್ಲಿ ಭಾನುವಾರ ನಡೆಯಿತು, ಕಿರೆಂ ಇಗರ್ಜಿಯ ಧರ್ಮಗುರು ವಂದನೀಯ ಫಾದರ್ ಓಸ್ವಾಲ್ಡ್ ಮೋಂತೆರೋ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಫಾದರ್ ಪೌಲ್ ಡಿಸೋಜ, ಕಂಕನಾಡಿ ಆಸ್ಪತ್ರೆಯ ಡಾ.ಉಜ್ವಲ್ ಶರ್ಮ,ಡಾ.ಯಶಸ್ವಿನಿ,ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ರೋಹನ್ ಡಿಕೋಸ್ತಾ, ಫೌಲ್ ಮಿರಾಂದ,ವಿಲ್ಪ್ರೆಡ್ ಮೋನಿಸ್, ಕಿನ್ನಿಗೋಳಿ ಆಸ್ಪ ಫಿಟ್ನೆಸ್ ನ ಆಸ್ರಿತ್, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ಪ್ರಣೀಕ್,ಹೆಲೆನ್ ಡಿಸೋಜ, ಮಂಗಳೂರು ಉತ್ತರ ವಲಯ ರೆಡ್ ರಾಕ್ ನ ರೋಯ್ಟನ್ ಡಿಸೋಜ,ಹ್ಯಾಲ್ಟನ್ ಸಿಕ್ವೇರಾ,ನೇವಿಲ್ ಡಿಮೆಲ್ಲೊ, ಮತ್ತಿತರರು ಉಪಸ್ಥಿತರಿದ್ದರು.
ಡೆನ್ಸಿಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿ,ಹ್ಯಾಲ್ಟನ್ ಸಿಕ್ವೇರಾ ಸ್ವಾಗತಿಸಿ,ನೇವಿಲ್ ಡಿಮೆಲ್ಲೊ ಧನ್ಯವಾದಗಳು ಮಾಡಿದರು.