ಬಾಲಕಲಾವಿದ ಮಾಸ್ಟರ್ ಸಮರ್ಥ್ ಪ್ರಕಾಶ್ ಗೆ ಅಭಿನಂದನೆ
ಕಿನ್ನಿಗೋಳಿ: ಕಟೀಲು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಮಾಸ್ಟರ್ ಸಮರ್ಥ್ ಪ್ರಕಾಶ್ ಆಚಾರ್ಯ ಹಾಡಿರುವ ದೇಶಭಕ್ತಿ ಗೀತೆ 14 ಲಕ್ಷಮಿಕ್ಕಿ ವೀಕ್ಷಣೆಯನ್ನು ಪಡೆದ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ತಮ್ಮ ಕಿನ್ನಿಗೋಳಿಯ ಗೃಹ ನಿವಾಸದಲ್ಲಿ ಗೌರವಿಸಿ ಅಭಿನಂದಿಸಿದರು .ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ , ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬರ್ನಾಡ್ ,ಮೋನಪ್ಪ ಶೆಟ್ಟಿ ಎಕ್ಕಾರು, ಮಂಜುನಾಥ್ ಕಂಬಾರ್, ಶಯನ್ ಶೆಟ್ಟಿಗಾರ್, ಯೋಗೀಶ್ ಕೋಟ್ಯಾನ್, ಶರತ್ ಕಾರ್ನಾಡ್, ಶ್ರೀಮತಿಸುನಿತಾ ರೋಡ್ರಿಗಸ್ , ಸಂಜೀವ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.
ಮಾಸ್ಟರ್ ಸಮರ್ಥ್ ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ನಿವಾಸಿ ಕಿನಿಗೋಳಿ ಪಟ್ಟಣ ಪಂಚಾಯತ್ ಕೌನ್ಸಿಲರ್ ಪ್ರಕಾಶ್ ಕಿನ್ನಿಗೋಳಿ ಇವರ ಸುಪುತ್ರರಾಗಿದ್ದಾರೆ.