ಕಿನ್ನಿಗೋಳಿ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಕಮ್ಮಾಜೆ ನೇಕಾರ ಕಾಲೋನಿ ಬಳಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಜಯರಾಮ್ ಗೌಡ(59) ಗುರುತಿಸಲಾಗಿದೆ
ಮೃತ ಜಯರಾಮ್ ಗೌಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಬುಧವಾರ ರಾತ್ರಿ ತಾವು ಮಲಗುವ ಕೋಣೆಯ ಪಕ್ಕಾಸಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಗುರುವಾರ ಸಂಜೆ ನೆರೆಮನೆ ವಾಸಿಯೊಬ್ಬರು ಜಯರಾಮ್ ಗೌಡ ಕಾಣದಿರುವುದನ್ನು ಸಂಶಯದಿಂದ ಮನೆಯ ಮೇಲ್ಭಾಗದ ಹೆಂಚು ತೆಗೆದು ನೋಡಿದಾಗ
ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ
ಕೂದಲೇ ಸ್ಥಳೀಯರಾದ ಸುನಿಲ್ ಸಿಕ್ವೇರಾ, ಸುನಿಲ್ ಪೂಜಾರಿ,ನಾಗರಾಜ್, ಹೇಮರಾಜ್ ಮತ್ತಿತರರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತಿದ್ದಾರೆ
ಜಯರಾಮ್ ಗೌಡ ಹಲವಾರು ವರ್ಷಗಳಿಂದ ವೃತ್ತಿಯಲ್ಲಿ ಚಾಲಕರಾಗಿದ್ದು ಬಳಿಕ ಅನಾರೋಗ್ಯದ ನಿಮಿತ್ತ ಚಾಲಕ ವೃತ್ತಿಯಿಂದ ದೂರ ಸರಿದು ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಜಯರಾಮ್ ಗೌಡ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ